ಪಟ್ನಾ: ಜಿಲ್ಲೆಯಲ್ಲಿ ಕಟ್ಟಡದ ತಳಮಹಡಿಯಲ್ಲಿ ಕೋಚಿಂಗ್ ತರಗತಿಗಳನ್ನು ನಡೆಸುವುದು ಕಂಡುಬಂದಲ್ಲಿ ಅಂಥವುಗಳಿಗೆ ತಕ್ಷಣವೇ ಬೀಗಮುದ್ರೆ ಹಾಕಲಾಗುವುದು ಎಂದು ಪಟ್ನಾ ಜಿಲ್ಲಾಡಳಿತ ಭಾನುವಾರ ಎಚ್ಚರಿಕೆ ನೀಡಿದೆ.

ಪಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಅವರು, ‘ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತಳಮಹಡಿಯಲ್ಲಿ ತರಗತಿಗಳನ್ನು ನಡೆಸುತ್ತಿರುವ ಯಾವುದೇ ಕೋಚಿಂಗ್ ಸೆಂಟರ್ ಈವರೆಗೆ ಪತ್ತೆಯಾಗಿಲ್ಲ. ಅಂಥವುಗಳು ಕಂಡುಬಂದರೆ ತತ್ಕ್ಷಣವೇ ಅವುಗಳಿಗೆ ಬೀಗಮುದ್ರೆ ಹಾಕಲು ಸೂಚನೆ ನೀಡಲಾಗಿದೆ. ತಳಮಹಡಿಯಲ್ಲಿ ತರಗತಿಗಳನ್ನು ನಡೆಸುವುದು ಅಸ್ತಿತ್ವದಲ್ಲಿರುವ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿದರು.

‘ನಿಯಮಾನುಸಾರ ತರಗತಿಗಳನ್ನು ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕೋಚಿಂಗ್ ಸಂಸ್ಥೆಗಳಿಗೆ ಸೂಚಿಸಿರುವ ಜಿಲ್ಲಾಡಳಿತವು, ಅದಕ್ಕಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಕೋಚಿಂಗ್ ಸೆಂಟರ್ ಆರಂಭಕ್ಕೂ ಮುನ್ನ ನೋಂದಣಿ ಕಡ್ಡಾಯ ಎಂದು ತಿಳಿಸಿದೆ. ನಿಯಮ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದೆ’ ಎಂದು ಮಾಹಿತಿ ನೀಡಿದರು.

‘ಈವರೆಗೆ ಪಟ್ನಾದಲ್ಲಿರುವ 1,100 ಕೋಚಿಂಗ್ ಸೆಂಟರ್ಗಳಿಂದ ನೋಂದಣಿ ಅಥವಾ ನವೀಕರಣಕ್ಕಾಗಿ ಅರ್ಜಿ ಸ್ವೀಕರಿಸಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.