ಆಧಾರರಹಿತ: ಎನ್‌ಟಿಎ ಸ್ಪಷ್ಟನೆ
‘ನೀಟ್–ಯುಜಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ವರದಿ ಸಂಪೂರ್ಣ ಆಧಾರರಹಿತ’ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸೋಮವಾರ ಸ್ಪಷ್ಟಪಡಿಸಿದೆ. ‘ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆಗುತ್ತಿರುವ ಪ್ರಶ್ನೆಪತ್ರಿಕೆಗೂ ವಾಸ್ತವ ಪ್ರಶ್ನೆಪತ್ರಿಕೆಗೂ ಯಾವುದೇ ರೀತಿಯ ಸಾಮ್ಯತೆ ಇಲ್ಲ’ ಎಂದು ಎನ್‌ಟಿಎ ಹೇಳಿದೆ. ಎನ್‌ಟಿಎ ಸುರಕ್ಷತೆ ವ್ಯವಸ್ಥೆ ಸಾಮಾನ್ಯ ನಿರ್ವಹಣಾ ಪ್ರಕ್ರಿಯೆಯನ್ನು ಪರಿಶೀಲಿಸಿದ್ದು ಪ್ರಶ್ನೆಪತ್ರಿಕೆ ಸೋರಿಕೆ ವರದಿ ಆಧಾರರಹಿತ ಎಂಬುದು ದೃಢಪಟ್ಟಿದೆ ಎಂದು ಎನ್‌ಟಿಎ ಹಿರಿಯ ನಿರ್ದೇಶಕ ಸಾಧನಾ ಪರಾಶರ್ ಪ್ರತಿಕ್ರಿಯಿಸಿದ್ದಾರೆ. ಪರೀಕ್ಷೆಯು ಒಮ್ಮೆ ಆರಂಭವಾದ ನಂತರ ಪರೀಕ್ಷಾ ಕೇಂದ್ರಗಳಿಗೆ ಹೊರಗಿನ ಯಾವುದೇ ವ್ಯಕ್ತಿಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.