ಗುವಾಹಟಿ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ 'ಭಾರತ್ ಜೋಡೊ ನ್ಯಾಯ ಯಾತ್ರೆ'ಯು ಭಾನುವಾರ ಎರಡನೇ ಬಾರಿ ಅಸ್ಸಾಂ ಪ್ರವೇಶಿಸಿದೆ. ನಿನ್ನೆ (ಶನಿವಾರ) ನೆರೆಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಿತ್ತು.

ಬಿಸ್ವನಾಥ್ ಜಿಲ್ಲೆಯ ರಾಜ್ಗಢದ ಮೂಲಕ ಅಸ್ಸಾಂ ಪ್ರವೇಶಿಸಿದ ಯಾತ್ರೆಯು ರಾಜ್ಯದ ಮಧ್ಯ ಭಾಗದಲ್ಲಿರುವ ನಾಗಾಂವ್ ಜಿಲ್ಲೆಯ ಕಡೆಗೆ ಸಾಗುತ್ತಿದೆ. ನಾಗಾಂವ್ನ ಕಲಿಯಬೋರ್ನಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.

ಕಾಲ್ನಡಿಗೆಯಲ್ಲಿ ಮತ್ತು ಬಸ್ಸಿನಲ್ಲಿ ನಡೆಸಲಾಗುತ್ತಿರುವ ಮೆರವಣಿಗೆಯು ಗುರುವಾರದಿಂದ ಶನಿವಾರ ಮಧ್ಯಾಹ್ನದವರೆಗೆ ಅಸ್ಸಾಂ ಪ್ರಯಾಣದ ಮೊದಲ ಹಂತವನ್ನು ನಡೆಸಿತು.

ಅಸ್ಸಾಂ ರಾಜ್ಯಕ್ಕೆ ಎರಡನೇ ಬಾರಿ ಭೇಟಿ ನೀಡುತ್ತಿದ್ದಂತೆ ರಾಜ್ಯದಲ್ಲಿ ಯಾತ್ರೆಗೆ ಬೆಂಬಲ ನೀಡಿದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು.
.ಅಸ್ಸಾಂ: ಮುಂದುವರಿದ ಭಾರತ ಜೋಡೊ ನ್ಯಾಯ ಯಾತ್ರೆ; ಜನರೊಂದಿಗೆ ರಾಹುಲ್ ಸಂವಾದ.ಅಸ್ಸಾಂ ಸರ್ಕಾರ ಭಾರತದಲ್ಲೇ ಅತಿ ಭ್ರಷ್ಟ: ರಾಹುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.