ಕಿಶನ್‌ಗಂಜ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆ ಇಂದು ಕಿಶನ್‌ಗಂಜ್ ಮೂಲಕ ಬಿಹಾರ ಪ್ರವೇಶಿಸಿದೆ.

ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿ ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಮರುದಿನವೇ ರಾಹುಲ್ ಯಾತ್ರೆ ಬಿಹಾರ ತಲುಪಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಇತರ ಹಿರಿಯ ನಾಯಕರು ರಾಹುಲ್ ಅವರನ್ನು ಬಿಹಾರಕ್ಕೆ ಬರಮಾಡಿಕೊಂಡರು. 2020ರ ವಿಧಾನಸಭಾ ಚುನಾವಣಾ ಪ್ರಚಾರದ ನಂತರ ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿದೆ

ಕಿಶನ್‌ಗಂಜ್‌ನಲ್ಲಿ ಇಂದು ರ್‍ಯಾಲಿ ಆಯೋಜಿಸಲಾಗಿದೆ. ಮಂಗಳವಾರ ಪಕ್ಕದ ಜಿಲ್ಲೆಯಾದ ಪೂರ್ಣಿಯಾದಲ್ಲಿ ಮತ್ತು ಬುಧವಾರ ಕಟಿಹಾರ್‌ನಲ್ಲಿ ಒಟ್ಟು ಮೂರು ದಿನ ರ್‍ಯಾಲಿ ನಡೆಯಲಿದೆ. ಯಾತ್ರೆಯು ಮಶ್ಚಿಮ ಬಂಗಾಳಕ್ಕೆ ಗುರುವಾರ ಮರಳಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.