ನವದೆಹಲಿ: ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾಂಗೊಂಗ್ ಸರೋವರಕ್ಕೆ ಬೈಕ್ ರೈಡ್ ಮಾಡಿದ್ದಾರೆ. ರಾಹುಲ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

KTM 390 ಬೈಕ್ ಅನ್ನು ರಾಹುಲ್ ಚಲಾಯಿಸಿದ್ದು, ಅವರೊಂದಿಗೆ ಇನ್ನೂ ಹಲವರು ಬೈಕ್ ರೈಡ್ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಂಡ ರಾಹುಲ್ ‘ ಪಾಂಗೊಂಗ್ ಸರೋವರಕ್ಕೆ ಹೊರಟಿದ್ದೇವೆ, ಇದು ಜಗತ್ತಿನ ಅತಿ ಸುಂದರ ಪ್ರದೇಶಗಳಲ್ಲಿ ಒಂದು ಎಂದು ನನ್ನ ತಂದೆಯವರು ಯಾವಾಗಲೂ ಹೇಳುತ್ತಿದ್ದರು’ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಟ್ವಿಟರ್ (ಎಕ್ಸ್)ನಲ್ಲಿಯೂ ಅಪರೂಪದ ಕ್ಷಣಗಳ ಕೆಲವು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.

‘ನನ್ನ ಬಳಿ KTM 390 ಬೈಕ್ ಇದೆ. ಆದರೆ ಅದನ್ನು ಓಡಿಸಲು ನನ್ನ ಭದ್ರತಾ ಸಿಬ್ಬಂದಿ ಅವಕಾಶ ಕೊಡುವುದಿಲ್ಲ’ ಎಂದು ಈ ಹಿಂದೆ ರಾಹುಲ್ ಹೇಳಿದ್ದರು. ಜೊತೆಗೆ ಮೆಕ್ಯಾನಿಕ್ ಜೊತೆ ಬೈಕ್ ಬಗೆಗಿನ ಸೂಕ್ಷ್ಮ ಅಂಶಗಳನ್ನು ಕಲಿತ ಬಗ್ಗೆ ಯುಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದ್ದರು.

ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ‘ಲಡಾಖ್ ಮತ್ತು ಜಮ್ಮು ಕಾಶ್ಮೀರ’ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ರಾಹುಲ್ ಅವರ ಮೊದಲ ಲಡಾಖ್ ಭೇಟಿಯಾಗಿದೆ. ಆಗಸ್ಟ್ 25ರವರೆಗೆ ಲಡಾಖ್ನಲ್ಲಿ ರಾಹುಲ್ ಗಾಂಧಿ ಇರಲಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.