ತಿರುವನಂತರಪುರ: ಕೇರಳ ಮುಖ್ಯಮಂತ್ರಿಯಾಗಿದ್ದ ದಿವಂಗತ ಉಮ್ಮನ್ ಚಾಂಡಿ ತಮ್ಮ ಆಡಳಿತದಲ್ಲಿ ಮಾಡಿದ ಕೆಲಸ ಮತ್ತು ಅವರು ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಗುರುವಾರ ಸ್ಮರಿಸಿದ ಕಾಂಗ್ರೆಸ್ ನಾಯಕರು, ರಾಜ್ಯದಾದ್ಯಂತ ಜನರಿಗೆ ನೆರವು ನೀಡಲು ಅವರ ಹೆಸರಿನಲ್ಲಿ ಪಕ್ಷವು ಶೀಘ್ರವೇ ಚಾರಿಟಬಲ್ ಮಿಷನ್ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.

ಪಕ್ಷದ ಧೀಮಂತ ನಾಯಕ ಚಾಂಡಿ ಅವರ ಕುರಿತು ಕೆಪಿಸಿಸಿ ಸಿದ್ಧಪಡಿಸಿರುವ ‘ಆರ್ದ್ರಮಾನಸ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರು, ‘ಚಾಂಡಿ ಅವರು ನಿಧನರಾದಾಗ ಅವರ ಅಂತಿಮ ಯಾತ್ರೆಯಲ್ಲಿ ಜನತೆಯು ಸಲ್ಲಿಸಿದ ಗೌರವವು, ಚಾಂಡಿಯವರ ಕೆಲಸ ಮತ್ತು ಜನರ ಮೇಲಿಟ್ಟಿದ್ದ ಪ್ರೀತಿ, ಕರುಣೆ ಎಂಥದ್ದು ಎನ್ನುವುದನ್ನು ತೋರಿಸಿತು’ ಎಂದು ಸ್ಮರಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮಾತನಾಡಿ, ‘ಚಾಂಡಿಯವರು ಕಾಂಗ್ರೆಸ್ ಸದಾಕಾಲ ಹೆಮ್ಮೆಪಡುವ ನಾಯಕರಾಗಿದ್ದರು. ಅವರು ತಮ್ಮ ಕೆಲಸದ ಮೂಲಕ ಸಾವಿರಾರು ಜನರ ಮನಮುಟ್ಟಿದ್ದರು’ ಎಂದು ಬಣ್ಣಿಸಿದರು.

‘ನನ್ನ ದೀರ್ಘಕಾಲದ ಮತ್ತು ನಂಬಿಕಸ್ತ ಸ್ನೇಹಿತ ಚಾಂಡಿಯವರ ಸಾವಿನ ನೋವಿನಿಂದ ಇನ್ನೂ ಹೊರಬಂದಿಲ್ಲ. ಪಕ್ಷದ ಧೀಮಂತ ನಾಯಕನೊಂದಿಗಿನ ಸಂಬಂಧವನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಎ.ಕೆ. ಆಂಟನಿ ಹೇಳಿದರು.

‘ಚಾಂಡಿಯವರು ಜನರಿಗಾಗಿ ಮತ್ತು ಪಕ್ಷಕ್ಕಾಗಿ ಮಾಡಿದ ಕೆಲಸವನ್ನು ಸ್ಮರಿಸುವ ಏಕೈಕ ಮಾರ್ಗವೆಂದರೆ ರಾಜ್ಯದಾದ್ಯಂತ ಜನರಿಗೆ ನೆರವಾಗುವಂತಹ ಕಾರ್ಯಕ್ರಮ ನಡೆಸುವುದಾಗಿದೆ. ಚಾಂಡಿಯವರ ಹೆಸರಿನಲ್ಲಿ ಚಾರಿಟಬಲ್ ಮಿಷನ್ ಸ್ಥಾಪನೆ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ’ ಎಂದೂ ತಿಳಿಸಿದರು.

‘ನಾವು ಚಾಂಡಿಯವರ ಕುಟುಂಬದೊಂದಿಗೆ ಚರ್ಚಿಸಿದ ನಂತರ ಚಾರಿಟಬಲ್ ಮಿಷನ್ ಅನ್ನು ಒಂದು ತಿಂಗಳೊಳಗೆ ಕಾರ್ಯರೂಪಕ್ಕೆ ತರುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.