ಬೆಂಗಳೂರು: ರಾಜ್ಯಸಭೆಯ ಬಿಜೆಪಿ ಸದಸ್ಯ ಪ್ರಕಾಶ್ ಜಾವಡೇಕರ್ ಪಾರ್ಟಿಯೊಂದರಲ್ಲಿ ಶಾಂಪೇನ್ ಬಾಟಲಿ ಹಿಡಿದಿರುವ ಚಿತ್ರವನ್ನು ಯುವ ಕಾಂಗ್ರೆಸ್ನ ರಾಷ್ಟ್ರ ಘಟಕದ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ತಮ್ಮ ಟ್ವಿಟರ್ನಲ್ಲಿ ಫೋಟೊ ಹಂಚಿಕೊಂಡಿರುವ ಶ್ರೀನಿವಾಸ್ ಅವರು, ಇದು ಯಾರು ಗುರುತಿಸುವಿರಾ? ಎಂದು ಬರೆದುಕೊಂಡಿದ್ದಾರೆ.

ಕಠ್ಮಂಡುವಿನ ನೈಟ್ಕ್ಲಬ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇರುವ ವಿಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ವಿಡಿಯೊ ವೈರಲ್ ಆಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಗದ್ದಲ ಎಬ್ಬಿಸಿದೆ.

ಇದನ್ನೂ ಓದಿ:ನೇಪಾಳದ ನೈಟ್ ಕ್ಲಬ್ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ: ವಿಡಿಯೊ ವೈರಲ್

ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ರಾಹುಲ್ ನೇಪಾಳಕ್ಕೆ ಹೋಗಿದ್ದರು. ಆಗ ತೆಗೆದ ವಿಡಿಯೊ ಇದು ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.