ನವದೆಹಲಿ: ‘ಹರಿಯಾಣ ಮಾಂಗೆ ಹಿಸಾಬ್’ ಅಭಿಯಾನದ ವೇಳೆ ಜನರಿಂದ ಸಂಗ್ರಹಿಸಲಾದ 20 ಲಕ್ಷದಷ್ಟು ಸಲಹೆಗಳ ಪರಾಮರ್ಶೆ ಬಳಿಕ ಪಕ್ಷವು ‘ಜನತಾ ಕಾ ಮ್ಯಾನಿಫೆಸ್ಟೊ’ (ಜನರ ಪ್ರಣಾಳಿಕೆ) ಸಿದ್ಧಪಡಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ಬುಧವಾರ ಹೇಳಿವೆ.

ಪಕ್ಷವು ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಈ ಅಭಿಯಾನವನ್ನು ಹಮ್ಮಿಕೊಂಡಿತ್ತು.

ಮಹಿಳೆಯರು, ಯುವ ಸಮುದಾಯ, ರೈತರು, ಹಿರಿಯ ನಾಗರಿಕರು, ಕಾರ್ಮಿಕರು, ಕುಶಲಕರ್ಮಿಗಳು, ವಲಸೆ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಗುಂಪುಗಳು, ವರ್ತಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಶಿಕ್ಷಕರು, ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಹಾಗೂ ನಿರ್ಲಕ್ಷಕ್ಕೆ ಒಳಗಾದ ಸಮುದಾಯಗಳಿಂದ ಪಕ್ಷ ಸಲಹೆಗಳನ್ನು ಸ್ವೀಕರಿಸಿದೆ. ಇವುಗಳನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

‘ಪಕ್ಷ ಸಿದ್ಧಪಡಿಸುವ ಭವಿಷ್ಯದ ನೀತಿ ನಿರೂಪಣೆಯಲ್ಲಿ ಹರಿಯಾಣದ ಪ್ರತಿಯೊಬ್ಬ ನಾಗರಿಕನ ಅಭಿಪ್ರಾಯಕ್ಕೂ ಸ್ಥಾನ ಸಿಗಬೇಕು’ ಎಂಬುದು ಕಾಂಗ್ರೆಸ್‌ನ ವಿಚಾರವಾಗಿದೆ. ಜೊತೆಗೆ, ಸಾರ್ವಜನಿಕರ ಆಶೋತ್ತರಗಳನ್ನು ಪ್ರತಿಫಲಿಸುವ ಪ್ರಣಾಳಿಕೆ ಬಿಡುಗಡೆ ಮಾಡಬೇಕು ಎಂಬ ಇರಾದೆಯನ್ನೂ ಪಕ್ಷದ ಹೊಂದಿದೆ ಎಂದು ಮೂಲಗಳು ಹೇಳಿವೆ.

‘ಹರಿಯಾಣ ಮಾಂಗೆ ಹಿಸಾಬ್’ ಅಭಿಯಾನ

* ‘ಹರಿಯಾಣ ಮಾಂಗೆ ಹಿಸಾಬ್’ ಅಭಿಯಾನ ಹಾಗೂ ಹಿರಿಯ ಸಂಸದ ದೀಪೇಂದರ್ ಹೂಡಾ ನೇತೃತ್ವದಲ್ಲಿ ನಡೆದ ಪಾದಯಾತ್ರೆ ವೇಳೆ 15 ಲಕ್ಷ ಸಲಹೆಗಳ ಸಂಗ್ರಹ

* ಆನ್‌ಲೈನ್ ಶುಲ್ಕ ರಹಿತ ದೂರವಾಣಿ ಸಂಖ್ಯೆಗಳಿಗೆ ಕರೆಗಳ ಮೂಲಕ 5 ಲಕ್ಷ ಸಲಹೆಗಳ ಸಂಗ್ರಹ

* ಅಭಿಯಾನದ ವೇಳೆ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸಮನ್ವಯಕಾರರ ನೇಮಕ

* ಸ್ಥಳೀಯ ನಾಯಕರೊಂದಿಗೆ ಸಮನ್ವಯ ಸಲಹೆಗಳ ಸಂಗ್ರಹಕ್ಕೆ ನೆರವಾಗಲು ವಾಟ್ಸ್‌ಆ್ಯಪ್ ಗ್ರೂಪ್‌ಗಳ ರಚನೆ

* ‘ಸುಝಾವ್ ಪೇಟಿ’ (ಸಲಹಾ ಪೆಟ್ಟಿಗೆ) ‘ಸುಝಾವ್ ವಾಹನ್’ (ಸಲಹಾ ವಾಹನ) ಮೂಲಕವೂ ಅಭಿಪ್ರಾಯ ಸಲಹೆಗಳ ಸಂಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.