ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಚೊಚ್ಚಲ ಸಣ್ಣ ಉಪಗ್ರಹ ಉಡಾವಣೆ ನೌಕೆ ಎಸ್‌ಎಸ್‌ಎಲ್‌ವಿ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಭೂ ವೀಕ್ಷಣೆ ಉಪಗ್ರಹ ಮತ್ತು ವಿದ್ಯಾರ್ಥಿಗಳ ಆಜಾದಿ ಉಪಗ್ರಹ (AzaadiSAT) ಅನ್ನು ಹೊತ್ತು ಸಾಗಲಿದೆ.

ಭಾನುವಾರ ನಸುಕಿನ ವೇಳೆ 2.26 ಗಂಟೆಗೆ ಕ್ಷಣಗಣನೆ ಆರಂಭಗೊಂಡಿದೆ ಎಂದು ಇಸ್ರೋ ತಿಳಿಸಿದೆ.

ವ್ಯವಹಾರಿಕ ದೃಷ್ಟಿಯಿಂದ ಎಸ್ಎಸ್‌ಎಲ್‌ವಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಸುಮಾರು 500 ಕೆಜಿ ವರೆಗಿನ ಉಪಗ್ರಹಗಳನ್ನು 500 ಕಿ.ಮೀ. ವ್ಯಾಪ್ತಿಯ ಕಡಿಮೆ ಮಟ್ಟದ ಭೂ ಕಕ್ಷೆಗೆ ಸೇರಿಸುವ ಯೋಜನೆ ಇದಾಗಿದೆ.

'ಎಸ್‌ಎಸ್‌ಎಲ್‌ವಿ-ಡಿ1/ಇಒಎಸ್-02 ಯೋಜನೆ: ಕಾಲಮಾನ 02.26ಕ್ಕೆ ಕ್ಷಣಗಣನೆ ಆರಂಭವಾಗಿದೆ' ಎಂದು ಭಾನುವಾರ ಇಸ್ರೋ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಎಚ್‌ಎಆರ್)ದ ಉಡಾವಣಾ ಸ್ಥಳದಿಂದ ಬೆಳಗ್ಗೆ 9.18ಕ್ಕೆ ಎಸ್ಎಸ್‌ಎಲ್‌ವಿ ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಉಡಾವಣೆಗೊಂಡು 13 ನಿಮಿಷಗಳಲ್ಲಿ ಇಒಎಸ್-02 ಮತ್ತು ಆಜಾದಿಸ್ಯಾಟ್ ಉಪಗ್ರಹಗಳನ್ನು ನಿರೀಕ್ಷಿತ ಕಕ್ಷೆಗೆ ಸೇರಿಸಲಿದೆ.

ಆಜಾದಿ ಉಪಗ್ರಹವು 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ, ದೇಶದಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ನಿರ್ಮಿಸಿರುವ ಉಪಗ್ರಹವಾಗಿದೆ. ಎಂಟು ಕೆ.ಜಿ ತೂಕದ ಪ್ರಾಯೋಗಿಕ ಉಪಗ್ರಹವು ತನ್ನದೇ ಸೌರ ಫಲಕಗಳ ಫೋಟೋ ತೆಗೆಯಲು ಸೆಲ್ಫಿ ಕ್ಯಾಮೆರಾ ಮತ್ತು ದೀರ್ಘ ವ್ಯಾಪ್ತಿಯ ಸಂವಹನ ಸಾಮರ್ಥ್ಯದ ಟ್ರಾನ್ಸ್‌ಪಾಂಡರ್‌ಅನ್ನು ಒಳಗೊಂಡಿದೆ. ಉಪಗ್ರಹವು 6 ತಿಂಗಳ ಕಾಲ ಜೀವಿತಾವಧಿ ಹೊಂದಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.