ನವದೆಹಲಿ: ದೇಶದಾದ್ಯಂತ ಜುಲೈ 15ರವರೆಗೆ 45,432 ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 21,085 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 4,252 ಜನರು ಮೃತಪಟ್ಟಿದ್ದಾರೆ.

ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ಮಂಗಳವಾರ ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದು, ಒಟ್ಟು ಪ್ರಕರಣಗಳಲ್ಲಿ ಶೇ 84.4ರಷ್ಟು ರೋಗಿಗಳು ಕೋವಿಡ್ ಪೀಡಿತರಾಗಿದ್ದರು ಎಂದು ತಿಳಿಸಿದ್ದಾರೆ.

ಕೋವಿಡ್ ಎರಡನೇ ಅಲೆಯ ಬಳಿಕ ಗಣನೀಯ ಸಂಖ್ಯೆಯಲ್ಲಿ ಕಪ್ಪುಶಿಲೀಂಧ್ರ ಪ್ರಕರಣಗಳು ವರದಿಯಾದವು. ಸೋಂಕು ಕುರಿತ ವಿಶ್ಲೇಷಣೆಯ ಬಳಿಕ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಪ್ಪು ಶಿಲೀಂಧ್ರ ಮತ್ತು ಇತರೆ ಶಿಲೀಂಧ್ರಗಳು ಅವಕಾಶವಾದಿ ಸೋಂಕುಗಳು. ಸಾಮಾನ್ಯವಾಗಿ ಇವು ಮಧುಮೇಹ, ಕ್ಯಾನ್ಸರ್ ಹಿನ್ನೆಲೆಯ ರೋಗಿಗಳು ಹಾಗೂ ಮದ್ಯವ್ಯಸನಿಗಳು ಸೇರಿದಂತೆ ಪ್ರತಿರೋಧ ಶಕ್ತಿಯು ಕಡಿಮೆ ಪ್ರಮಾಣದಲ್ಲಿ ಇರುವ ರೋಗಿಗಳಲ್ಲಿ ಕಂಡುಬರಲಿವೆ ಎಂದು ಸಚಿವರು ವಿವರಿಸಿದರು.

ಸೋಂಕಿನ ಸ್ವರೂಪ ವಿಶ್ಲೇಷಣೆಗೆ ಪೂರಕವಾಗಿ ಈ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಸಚಿವಾಲಯವು ಘೋಷಿಸಿದೆ. ಕೋವಿಡ್ ಕುರಿತು ರಾಷ್ಟ್ರೀಯ ಕಾರ್ಯಪಡೆಯ ಸಲಹೆಯನ್ನು ಆಧರಿಸಿ ಇದರ ಚಿಕಿತ್ಸೆ ಮತ್ತು ನಿರ್ವಹಣೆ ಸಂಬಂಧ ಸಲಹಾ ಸಮಿತಿಯನ್ನು ಜೂನ್ 7ರಂದು ರಚಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.