ಕಿಗಾಲಿ(ರವಾಂಡ):ಆಫ್ರಿಕಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರವಾಂಡದ ಅಧ್ಯಕ್ಷ ಪೌಲ್ ಕಗಾಮೆ ಅವರೊಂದಿಗೆ ದ್ವಿಪಕ್ಷಿಯ ಮಾತುಕತೆ ನಡೆಸಿ, ಹಣಕಾಸು ನೆರವಿನ ಒಪ್ಪಂದಗಳಿಗೆ ಸಹಿ ಹಾಕಿದರು.

ಭಾರತವು ರವಾಂಡಗೆ ₹1,300 ಕೋಟಿ ಸಾಲ ನೀಡಲು ಮುಂದಾಗಿದೆ. ಇದರಲ್ಲಿ ಅರ್ಧದಷ್ಟನ್ನು ಆ ದೇಶದ ಕೈಗಾರಿಕಾ ಪಾರ್ಕ್ಗಳ ಅಭಿವೃದ್ಧಿ ಮತ್ತು ಕಿಗಾಲಿ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಾಣಕ್ಕೆ ವಿನಿಯೋಗಿಸಲು ಯೋಜಿಸಲಾಗಿದೆ. ಉಳಿದರ್ಧವನ್ನು ಕೃಷಿ ವಲಯದ ಅಭಿವೃದ್ಧಿಗೆ ಮೀಸಲಿಡಲಾಗುತ್ತಿದೆ.

ಈ ಭೇಟಿ ವೇಳೆ ಮೋದಿ ಮತ್ತು ಕಗಾಮೆ ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದರು. ‘ರವಾಂಡದಲ್ಲಿ ಆದಷ್ಟೂ ಬೇಗ ಹೈ ಕಮೀಷ್ನರ್ ಆಫೀಸ್ ತೆರೆಯಲಾಗುವುದು. ಇದರಿಂದ ಎರಡು ದೇಶಗಳ ನಡುವಿನ ಸಂವಹನ ಸುಗಮ ಆಗುವುದಲ್ಲದೆ, ರಾಜತಾಂತ್ರಿಕ, ಪಾಸ್ಪೋರ್ಟ್, ವಿಸಾ ಸೇವೆಗಳು ಲಭ್ಯವಾಗಲಿವೆ’ ಎಂದು ಮೋದಿ ಇದೇ ವೇಳೆ ತಿಳಿಸಿದರು.

ರವಾಂಡ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರು ನೀಡುತ್ತಿರುವ ಮೊದಲ ಭೇಟಿ ಇದಾಗಿತ್ತು. ಆ ದೇಶದ ಅಧ್ಯಕ್ಷರು ವಿಮಾನ ನಿಲ್ದಾಣದ ವರೆಗೆ ಬಂದು ಮೋದಿ ಅವರನ್ನು ಆದರದಿಂದ ಸ್ವಾಗಿಸಿದರು. ಈ ಭೇಟಿಯ ವೇಳೆ ಪ್ರಧಾನಿ ಅವರು ಆ ದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ಪರಿಚಯಿಸಿಕೊಟ್ಟರು.

ಈ ಭೇಟಿಯ ಬಳಿಕ ಮೋದಿ ಮಂಗಳವಾರ ಮತ್ತು ಬುಧವಾರ ಉಗಾಂಡಕ್ಕೆ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.