ನವದೆಹಲಿ: 2019 ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲಿಅಪರಾಧ ಹಿನ್ನೆಲೆಯುಳ್ಳಸಂಸದರ ಸಂಖ್ಯೆ ಶೇ.43ರಷ್ಟು ಇದೆ. ಅಂದರೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಮತದಾರರು ತಮ್ಮ ಚುನಾವಣಾ ಕ್ಷೇತ್ರದ ಅಭ್ಯರ್ಥಿಭ್ರಷ್ಟಾಚಾರ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೂ ಅದನ್ನು ಕಡೆಗಣಿಸಿ ಮತದಾನ ಮಾಡಿದ್ದಾರೆ ಎಂಬುದು ಇಲ್ಲಿ ಸ್ಪಷ್ಟ.

ಸಿಐಬಿ, ಜಾರಿ ನಿರ್ದೇಶನಾಲಯ ಮತ್ತು ರಾಷ್ಚ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿರುವ ವ್ಯಕ್ತಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ.ಅಕ್ರಮ ಸಂಪಾದನೆ, ಹಣದ ಅವ್ಯವಹಾರ ಮತ್ತು ಭಯೋತ್ಪಾದನೆಕೃತ್ಯಗಳ ಆರೋಪಿಯಾಗಿರುವ ಸಂಸದರು ಲೋಕಸಭೆಯಲ್ಲಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಭಯೋತ್ಪಾದನೆ ಕೃತ್ಯದ ಆರೋಪಿಗಳು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿವಾದಿತ ಅಭ್ಯರ್ಥಿಯಾಗಿದ್ದರು ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್. ಆರು ಮಂದಿಯನ್ನು ಬಲಿ ತೆಗೆದುಕೊಂಡ 2008 ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಧಾನ ಆರೋಪಿಯಾಗಿದ್ದಾರೆ ಪ್ರಜ್ಞಾ. ಭಯೋತ್ಪಾದನಾ ಕೃತ್ಯದ ಆರೋಪಿಯಾಗಿರುವ ಪ್ರಜ್ಞಾ ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ವಿರುದ್ಧಸ್ಪರ್ಧಿಸಿ3.6 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಇದನ್ನೂ ಓದಿ:ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ: ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ

ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದು ಭಯೋತ್ಪಾದನಾ ಕೃತ್ಯದ ಆರೋಪಿಗೆ ಟಿಕೆಟ್ ನೀಡಿದ್ದು. ಪ್ರಜ್ಞಾ ವಿರುದ್ಧ ಹಲವಾರು ಪ್ರಕರಣಗಳಿದ್ದು ಈಕೆ ತೀವ್ರ ಹಿಂದುತ್ವವಾದಿ ಎಂದೇ ಹೇಳಲಾಗುತ್ತಿದೆ.

ಭಯೋತ್ಪಾದನಾ ನಿಗ್ರಹ ತಂಡದ ಆರೋಪ ಪಟ್ಟಿ ಪ್ರಕಾರ 2006ರಿಂದ ಪ್ರಜ್ಞಾ, ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿ ನಡೆಯುವ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮಾಲೇಗಾಂವ್ ಸ್ಫೋಟ ನಡೆಸುವುದಕ್ಕಾಗ ಪ್ರಜ್ಞಾ ಅವರೇ ವ್ಯಕ್ತಿಯೊಬ್ಬರನ್ನು ಗೊತ್ತು ಮಾಡಿದ್ದರು.

ಇದನ್ನೂ ಓದಿ:ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆ ದೇಶಭಕ್ತಎಂದ ಬಿಜೆಪಿ ಅಭ್ಯರ್ಥಿ ಸಾಧ್ವಿ

ಭ್ರಷ್ಟಾಚಾರ ಆರೋಪಿಗಳು
ಕಾಂಗ್ರೆಸ್ನ ಹಿರಿಯ ನೇತಾರ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಎಚ್. ರಾಜಾ ವಿರುದ್ಧ 3.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.ಹಣಕಾಸು ಅವ್ಯವಹಾರ ಪ್ರಕರಣದ ಆರೋಪಿಯಾಗಿರುವ ಕಾರ್ತಿ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದದಲ್ಲಿ ವಿದೇಶಿ ಹೂಡಿಕೆ ಅಭಿವೃದ್ಧಿ ಮಂಡಳಿಯ (ಎಫ್ಐಪಿಬಿ) ನಿಯಮಾವಳಿಯನ್ನು ಉಲ್ಲಂಘಿಸಿರುವ ಆರೋಪವನ್ನು ಕಾರ್ತಿ ಎದುರಿಸುತ್ತಿದ್ದಾರೆ. ಈ ಒಪ್ಪಂದದಲ್ಲಿ ಹಣಕಾಸು ಅವ್ಯವಹಾರವಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯವು(ಇ.ಡಿ) ತನಿಖೆ ನಡೆಸುತ್ತಿದೆ.

ಅದೇ ರೀತಿ ಮಾಜಿ ಟೆಲಿಕಾಂ ಸಚಿವ ಡಿಎಂಕೆಯ ದಯಾನಿಧಿ ಮಾರನ್ ಅವರು ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.ದಯಾನಿಧಿ ಮಾರನ್ ಚೆನ್ನೈ ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಪಿಎಂಕೆ ಪಕ್ಷದಎಸ್.ಆರ್ ಸ್ಯಾಮ್ ಪೌಲ್ ವಿರುದ್ಧ ಸ್ಪರ್ಧಿಸಿ 3.1 ಲಕ್ಷ ಮತಗಳಿಂದ ಗೆದ್ದಿದ್ದರು. ಅಕ್ರಮ ಹಣ ಸಂಪಾದನೆ ಮತ್ತು ಅಪರಾಧ ಸಂಚು ನಡೆಸಿದ ಆರೋಪದಲ್ಲಿ ಮಾರನ್ ವಿರುದ್ಧ ಆರೋಪ ಪಟ್ಟಿ ದಾಖಲಾಗಿದೆ.

ಡಿಎಂಕೆ ಪಕ್ಷದ ನೇತಾರರಾದ ಎ. ರಾಜಾ ಮತ್ತು ಕನಿಮೊಳಿ ವಿರುದ್ಧವೂ ಭ್ರಷ್ಟಾಚಾರದ ಆರೋಪವಿದೆ. ಇವರಿಬ್ಬರೂ ತುಂಬಾ ಮತಗಳ ಅಂತರದಿಂದ ಗೆದ್ದಿದ್ದರು. 2ಜಿ ಹಗರಣದ ಪ್ರಧಾನ ಆರೋಪಿಯಾಗಿರುವ ರಾಜಾ ನೀಲಗಿರಿ ಲೋಕಸಭಾ ಕ್ಷೇತ್ರದಲ್ಲಿ 1.2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.2017ರಲ್ಲಿ 2ಜಿ ಹಗರಣದಲ್ಲಿ ಆರೋಪಿಯಾಗಿದ್ದ ಕನಿಮೊಳಿ, ತೂತುಕುಡಿ ಲೋಕಸಭಾ ಕ್ಷೇತ್ರದಲ್ಲಿ 93,000 ಮತಗಳಿಂದ ಗೆದ್ದಿದ್ದಾರೆ.

2ಜಿ ತರಂಗಾಂತರದ ಹಂಚಿಕೆಯ ಪರವಾನಗಿಯಲ್ಲಿ ನಡೆದ ಅವ್ಯವಹಾರದಿಂದಾಗಿ ₹30,984 ಕೋಟಿ ನಷ್ಟವುಂಟಾಗಿದೆ ಎಂದು ಸಿಬಿಐ ಆರೋಪಿಸಿತ್ತು.2012 ಫೆಬ್ರುವರಿ 2 ರಂದು ಉಚ್ಛ ನ್ಯಾಯಾಲಯ ಈ ಪ್ರಕರಣವನ್ನು ತಳ್ಳಿತ್ತು.

ಹತ್ಯೆ ಪ್ರಕರಣದ ಆರೋಪಿಗಳು
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ- ಆರ್ಎಲ್ಡಿ ಮೈತ್ರಿಕೂಟದ ಅಭ್ಯರ್ಥಿ ಅಫ್ಜಲ್ ಅನ್ಸಾರಿ ಹತ್ಯಾ ಪ್ರಕರಣವೊಂದರ ಆರೋಪಿಯಾಗಿದ್ದಾರೆ.ಡಾನ್, ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಹೋದರನಾದ ಅಫ್ಜಲ್ ಅನ್ಸಾರಿ ಘಾಜೀಪುರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಕೇಂದ್ರ ಸಚಿವ ಮನೋಜ್ ಸಿನ್ಹಾಅವರನ್ನು 1 ಲಕ್ಷಕ್ಕಿಂತಲೂ ಹೆಚ್ಚು ಮತಗಳಿಂದ ಪರಾಭವಗೊಳಿಸಿದ್ದಾರೆ.

ಈಗ ಜೈಲಿನಲ್ಲಿರುವ ಮುಖ್ತಾರ್ ಅನ್ಸಾರಿ, ಹತ್ಯೆ, ಸುಲಿಗೆ, ಅಪಹರಣ ಮೊದಲಾದ ಪ್ರಕರಣದಲ್ಲಿ ಶಾಮೀಲಾಗಿದ್ದು,2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅಫ್ಜಲ್ ಅನ್ಸಾರಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಈತ 5 ಪ್ರಕರಣಗಳ ಆರೋಪಿ.ಹತ್ಯೆ, ಅಪರಾಧ ಸಂಚು, ಸರ್ಕಾರಿ ನೌಕರನ ಮೇಲೆ ಹಲ್ಲೆ ಮತ್ತುಕೊಲೆ ಯತ್ನ ಪ್ರಕರಣದಲ್ಲಿ ಈತನ ಹೆಸರಿದೆ. ಆದರೆ ಯಾವುದೇ ಪ್ರಕರಣಗಳಲ್ಲಿ ಈತ ದೋಷಿ ಎಂದು ಸಾಬೀತಾಗಿಲ್ಲ.

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಾರ 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಪರಾಧ ಹಿನ್ನೆಲೆ ಇರುವ ಸಂಸದರ ಸಂಖ್ಯೆಯಲ್ಲಿ ಶೇ. 26 ಏರಿಕೆಯಾಗಿದೆ.

ಗೆಲುವು ಗಳಿಸಿರುವ 233 ಸಂಸದರು ಅಪರಾಧ ಹಿನ್ನಲೆಯುಳ್ಳವರಾಗಿದ್ದಾರೆ. ಇದರಲ್ಲಿ ಬಿಜೆಪಿಯ 116 ಸಂಸದರು ಅಪರಾಧ ಹಿನ್ನಲೆಯವರಾಗಿದ್ದು ಕಾಂಗ್ರೆಸ್ನಲ್ಲಿ 29, ಜೆಡಿಯು 13, ಡಿಎಂಕೆ 10, ಟಿಎಂಸಿ-9 ಸಂಸದರಿದ್ದಾರೆ.

2014ರಲ್ಲಿ 185 ಸಂಸದರು ಅಪರಾಧ ಹಿನ್ನಲೆ ಹೊಂದಿದವರಾಗಿದ್ದು ಇದರಲ್ಲಿ 112 ಸಂಸದರ ವಿರುದ್ದ ಗಂಭೀರ ಆರೋಪಗಳಿವೆ.

2009ರಲ್ಲಿ 543 ಸಂಸದರ ಪೈಕಿ 162 ಮಂದಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದರು.ಇದರಲ್ಲಿ ಶೇ. 14ರಷ್ಟು ಮಂದಿ ವಿರುದ್ಧ ಗಂಭೀರ ಆರೋಪಗಳಿದ್ದವು.

2019ರ ಚುನಾವಣೆಯಲ್ಲಿ ಆಯ್ಕೆಯಾದಸಂಸದರಲ್ಲಿ ಶೇ.29ರಷ್ಟು ಮಂದಿ ಅತ್ಯಾಚಾರ, ಕೊಲೆ, ಹತ್ಯೆಗೆ ಯತ್ನ, ಮಹಿಳೆಯರ ಮೇಲೆ ದೌರ್ಜನ್ಯವೆಸಗಿರುವ ಆರೋಪ ಹೊಂದಿದವರಾಗಿದ್ದಾರೆ.

ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವರ ಸಂಖ್ಯೆ 2009ಕ್ಕೆ ಹೋಲಿಸಿದರೆ 2019ರಲ್ಲಿ ಶೇ. 109ರಷ್ಟು ಏರಿಕೆಯಾಗಿದೆ.

ಹತ್ಯೆ ಆರೋಪವಿರುವ ಸಂಸದರ ಸಂಖ್ಯೆ
ಬಿಜೆಪಿ - 5
ಬಿಎಸ್ಪಿ- 2
ಕಾಂಗ್ರೆಸ್ -1
ಎನ್ಸಿಪಿ -1
ವೈಎಸ್ಆರ್ ಕಾಂಗ್ರೆಸ್-1
ಪಕ್ಷೇತರ -1

ದ್ವೇಷದ ಭಾಷಣ ಮಾಡಿದ ಆರೋಪವಿರುವ 29 ಸಂಸದರು ಲೋಕಸಭೆಯಲ್ಲಿದ್ದಾರೆ.

ಕೇರಳದ ಇಡುಕ್ಕಿ ಲೋಕಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಡೀನ್ ಕುರಿಯಕೋಸ್ (ಕಾಂಗ್ರೆಸ್) ವಿರುದ್ಧ 204 ಅಪರಾಧ ಪ್ರಕರಣಗಳು ಇವೆ. ಇದರಲ್ಲಿ ನರ ಹತ್ಯೆ, ಅತಿಕ್ರಮ ಪ್ರವೇಶ, ದರೋಡೆ, ಬೆದರಿಕೆ ಮೊದಲಾದ ಪ್ರಕರಣಗಳು ಕುರಿಯಕೋಸ್ ವಿರುದ್ಧ ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.