ಮುಜಾಫರ್‌ನಗರ್: ಬಿಹಾರದ ಮುಜಾಫರ್‌ನಗರದಲ್ಲಿ ಹೈಪೊಗ್ಲೈಸೆಮಿಯಾ ಬಾಧಿಸಿ ಇಬ್ಬರು ಮಕ್ಕಳು ಬುಧವಾರ ಕೊನೆಯುಸಿರೆಳೆದಿದ್ದಾರೆ.ಇಲ್ಲಿಯವರೆಗೆ ಹೈಪೊಗ್ಲೈಸೆಮಿಯಾದಿಂದ ಸಾವಿಗೀಡಾದವರ ಸಂಖ್ಯೆ 47ಕ್ಕೇರಿದೆ. ಆದಾಗ್ಯೂ, ಇದೊಂದು ಸಾಂಕ್ರಾಮಿಕ ರೋಗ ಅಲ್ಲ, ಹೈಪೊಗ್ಲೈಸೆಮಿಯಾದಿಂದ ಇವರು ಸಾವಿಗೀಡಾಗಿದ್ದಾರೆ ಎಂದು ರಾಜ್ಯದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ರಕ್ತದಲ್ಲಿ ಸಕ್ಕರೆ ಅಂಶ ತೀರಾ ಕಡಿಮೆಯಾದಾಗ ಅಥವಾ ದೇಹದಲ್ಲಿ ಸೋಡಿಯಂ ಅಥವಾ ಪೊಟಾಶಿಯಂ ಕೊರತೆಯುಂಟಾಗುವ ಸ್ಥಿತಿಯೇ ಹೈಪೊಗ್ಲೈಸೆಮಿಯಾ.

ಮುಜಾಫರ್‌ನಗರದ ಜಿಲ್ಲಾಡಳಿತದ ಪ್ರಕಟಣೆ ಪ್ರಕಾರ ಇಬ್ಬರು ಮಕ್ಕಳು ಎಸ್‌ಕೆಎಂಸಿಹೆಚ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.ಅಲ್ಲಿ ಜೂನ್ 1ರಿಂದ ಇಲ್ಲಿಯವರೆಗೆ ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್) ಬಾಧಿತ117 ಪ್ರಕರಣಗಳು ದಾಖಲಾಗಿವೆ.
ಇದರಲ್ಲಿ 36 ಮಂದಿ ಸಾವಿಗೀಡಾಗಿದ್ದು, 24 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.ಕೆಲವರು ಚಿಕಿತ್ಸೆ ಪಡೆಯುತ್ತಿದ್ದು, 6 ಮಂದಿಯ ಸ್ಥಿತಿ ಗಂಭೀರವಾಗಿದೆ.

ಖಾಸಗಿ ಕೇಜ್ರಿವಾಲ್ ಆಸ್ಪತ್ರೆಯಲ್ಲಿ 55 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ ಏಳು ಮಂದಿ ಮಕ್ಕಳು ಸಾವಿಗೀಡಾಗಿದ್ದಾರೆ. ಬುಧವಾರ ಯಾವುದೇ ಸಾವು ನೋವು ವರದಿಯಾಗಿಲ್ಲ.ಚಿಕಿತ್ಸೆಯಲ್ಲಿರುವ ನಾಲ್ಕು ರೋಗಿಗಳ ಪರಿಸ್ಥಿತಿ ಗಂಭೀರವಾಗಿದೆ.

ಏತನ್ಮಧ್ಯೆ, ರಾಜ್ಯದ ಮುಖ್ಯ ನಿರ್ದೇಶಕ (ರೋಗ ನಿಯಂತ್ರಣ) ಆರ್.ಡಿ. ರಂಜನ್ ಅವರು ಭೇಟಿ ನೀಡಿ ಬಿಹಾರದ ರಾಜಧಾನಿ ಪಟನಾದಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.