ನವದೆಹಲಿ: ಸೇನಾಪಡೆಗಳ ಮುಖ್ಯಸ್ಥರ (ಸಿಡಿಎಸ್) ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

2021ರ ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ಅವರು ಹುತಾತ್ಮರಾಗಿದ್ದರು. ಆ ಬಳಿಕ ಸಿಡಿಎಸ್ ಹುದ್ದೆ ತೆರವಾಗಿದೆ.

‘ಬಿಪಿನ್ ರಾವತ್ ಸಾವು: ಪೈಲಟ್ ಕಕ್ಕಾಬಿಕ್ಕಿಯಾದ ಕಾರಣ ಅವಘಡ’

ಕೇಂದ್ರ ಸರ್ಕಾರದ ನೂತನ ‘ಅಗ್ನಿಪಥ್’ ಯೋಜನೆ ಘೋಷಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ‘ಶೀಘ್ರದಲ್ಲೇ ಸಿಡಿಎಸ್ ನೇಮಕಾತಿ ಆಗಲಿದೆ. ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲಿ ಸಿಡಿಎಸ್ ನೇಮಕಾತಿಗೆ ಸುತ್ತೋಲೆ ಹೊರಡಿಸಲಾಗಿತ್ತು.

ಬಿಪಿನ್ ರಾವತ್ ಕೊನೆಯ ಸಂದೇಶ ಬಿಡುಗಡೆ ಮಾಡಿದ ಸೇನೆ: ವಿಡಿಯೊ ನೋಡಿ

ಹೊಸ ನಿಯಮದ ಪ್ರಕಾರ, ಸೇವೆಯಲ್ಲಿರುವ ಅಥವಾ 62ಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಹಾಗೂ ವೈಸ್–ಅಡ್ಮಿರಲ್ ಸಿಡಿಎಸ್ ಹುದ್ದೆಗೆ ಅರ್ಹರಾಗಿದ್ದಾರೆ.

ಬಿಪಿನ್ ರಾವತ್ ಅವರು 2020ರ ಜನವರಿ 1ರಂದು ದೇಶದ ಮೊದಲ ಸಿಡಿಎಸ್ ಆಗಿ ಅಧಿಕಾರ ಸ್ವೀಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.