ನವದೆಹಲಿ: ಸು–30ಎಂಕೆಐ ಯುದ್ಧ ವಿಮಾನಗಳಿಗೆ 240 ಎಂಜಿನ್ಗಳ ಖರೀದಿಗೆ ರಕ್ಷಣಾ ಸಚಿವಾಲಯವು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಂಪನಿಯ ಜೊತೆ ₹26 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಎಂಜಿನ್ಗಳನ್ನು ಎಚ್ಎಎಲ್ನ ಕೋರಾಪುಟ್ ವಿಭಾಗವು ತಯಾರಿಸಲಿದೆ. ಈ ಎಂಜಿನ್ಗಳು ಸು–30 ಯುದ್ಧ ವಿಮಾನಗಳನ್ನು ಕಾರ್ಯಾಚರಣೆಯ ಸ್ಥಿತಿಯಲ್ಲಿ ಮುಂದುವರಿಸಲು ನೆರವಾಗುವ ನಿರೀಕ್ಷೆ ಇದೆ.

ರಕ್ಷಣಾ ಸಚಿವಾಲಯವು ಎಚ್ಎಎಲ್ ಜೊತೆ ಮಾಡಿಕೊಂಡಿರುವ ಈ ಒಪ್ಪಂದವು ಆತ್ಮನಿರ್ಭರ ಭಾರತ ಉಪಕ್ರಮಕ್ಕೆ ದೊಡ್ಡ ಬಲ ನೀಡಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.

ಒಪ್ಪಂದದ ಪ್ರಕಾರ ಎಚ್ಎಎಲ್ ಕಂಪನಿಯು ಪ್ರತಿ ವರ್ಷ 30 ಎಂಜಿನ್ಗಳನ್ನು ಪೂರೈಸಲಿದೆ. 240 ಎಂಜಿನ್ಗಳನ್ನು ಒಟ್ಟು ಎಂಟು ವರ್ಷಗಳಲ್ಲಿ ಪೂರೈಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.

ಎಂಜಿನ್ಗಳ ತಯಾರಿಕೆಯ ಸಂದರ್ಭದಲ್ಲಿ ಎಚ್ಎಎಲ್ ಕಂಪನಿಯು, ಎಂಎಸ್ಎಂಇ ವಲಯದ ಉದ್ದಿಮೆಗಳ, ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ವಲಯದ ಉದ್ದಿಮೆಗಳ ನೆರವನ್ನು ಪಡೆಯುವ ಆಲೋಚನೆ ಹೊಂದಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.