ಚಂಡೀಗಢ: ಪ್ರತ್ಯೇಕ ಖಾಲಿಸ್ತಾನ ಪ್ರತಿಪಾದಕ, ಸಿಖ್ ಧರ್ಮ ಪ್ರಚಾರಕ ಅಮೃತ್ ಪಾಲ್ ಸಿಂಗ್ ಸಹಚರರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನೀಡಿರುವ ಶಸ್ತ್ರಾಸ್ತ್ರ ಪರವಾನಗಿ ಹಿಂಪಡೆಯಲು ಮಾಡಿರುವ ವಿಳಂಬವು ಸದ್ಯ ಸಿಬಿಐ ತನಿಖೆಯ ಪ್ರಮುಖ ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಲೆಮರೆಸಿಕೊಂಡಿರುವ ಅಮೃತ್ ಪಾಲ್ ಸಿಂಗ್‌ಗೆ ಇಬ್ಬರು ನಿವೃತ್ತ ಯೋಧರು ವೈಯಕ್ತಿಕ ಭದ್ರತಾ ಅಧಿಕಾರಿಗಳಾಗಿದ್ದರು. ಇವರಲ್ಲಿ 19ನೇ ಸಿಖ್ ರೆಜಿಮೆಂಟ್‌ನಲ್ಲಿದ್ದ ವರಿಂದರ್ ಸಿಂಗ್ ಮತ್ತು 23ನೇ ಶಸ್ತ್ರಸಜ್ಜಿತ ಪಂಜಾಬ್ ರೆಜಿಮೆಂಟ್‌ನಲ್ಲಿದ್ದ ತಲ್ವಿಂದರ್ ಸಿಂಗ್ ಅವರ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೆರೆಯ ಕೇಂದ್ರಾಡಳಿತ ಪ್ರದೇಶದ ಜಿಲ್ಲೆಗಳಿಂದ ನವೀಕರಿಸಲಾಗಿದೆ ಅಥವಾ ಇವರಿಗೆ ಹೊಸದಾಗಿ ಪರವಾನಗಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೃತ್‌ಪಾಲ್ ಸಿಂಗ್ ಸಹಚರರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರ ಜತೆ ಘರ್ಷಣೆಗೆ ಇಳಿಯುವುದಕ್ಕೂ ಆರು ವಾರಗಳ ಮೊದಲು ಪಂಜಾಬ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಗುಪ್ತಚರ) ಸಂಬಂಧಿಸಿದ ಪೊಲೀಸ್ ಉಪ ಆಯುಕ್ತರಿಗೆ ಜನವರಿ 12ರಂದು ಈ ಬಗ್ಗೆ ಪತ್ರ ಬರೆದಿದ್ದರು. ಇದರ ಹೊರತಾಗಿಯೂ ಇವರ ಶಸ್ತ್ರಾಸ್ತ್ರಗಳ ಪರವಾನಗಿಗಳನ್ನು ರದ್ದುಪಡಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ವಿಚಾರಣೆ ಮತ್ತು ದಾಖಲೆಗಳ ಪರಿಶೀಲನೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಪರವಾನಗಿಗಳನ್ನು ಅನರ್ಹ ವ್ಯಕ್ತಿಗಳಿಗೆ ನೀಡುವಲ್ಲಿ ಕೆಲವು ಬಂದೂಕು ವಿತರಕರು, ಅಧಿಕಾರಿಗಳು, ಸಂಬಂಧಪಟ್ಟ ಜಿಲ್ಲೆಗಳ ಅಂದಿನ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು ಪಾತ್ರ ವಹಿಸಿರುವುದು ಕಂಡುಬಂದಿದೆ. ಪರವಾನಗಿಗಳನ್ನು ಪಡೆದ ವ್ಯಕ್ತಿಗಳು, ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಿದ ಸ್ಥಳಗಳ ನಿವಾಸಿಗಳಾಗಿರಲಿಲ್ಲ’ ಎಂದು ಸಿಬಿಐ ವಕ್ತಾರ ಆರ್.ಸಿ. ಜೋಶಿ ಅವರೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.