ನವದೆಹಲಿ: ಬಿಜೆಪಿ ನಾಯಕ ಮತ್ತು ದೆಹಲಿ ಗುರುದ್ವಾರ ಸಮಿತಿಯ ಸದಸ್ಯ ರಮಣ್ ಜೋತ್ ಸಿಂಗ್ ಅವರಿಗೆ ಗ್ಯಾಂಗ್‌ಸ್ಟರ್ ಗೋಗಿ ಮಾನ್ ಅವರಿಂದ ಬೆದರಿಕೆ ಪತ್ರ ಬಂದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ದ್ವಾರಕಾದ ಬಿಂದಾಪುರ ಪ್ರದೇಶದ ಪಂಖಾ ರಸ್ತೆಯ ಜೆಜೆ ಕಾಲೋನಿಯ ಸಮೀಪ ನಿಲ್ಲಿಸಿದ್ದ ಸಿಂಗ್ ಅವರ ಎಸ್‌ಯುವಿ ಕಾರಿನಲ್ಲಿ ಬೆದರಿಕೆ ಪತ್ರ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಯಾವ ಭದ್ರತೆಯು ನಿಮ್ಮನ್ನು ಉಳಿಸುವುದಿಲ್ಲ... ಕೊನೆಯ ಎಚ್ಚರಿಕೆ.... ಗೋಗಿ ಮಾನ್ ಗ್ರೂಪ್’ ಎಂದು ಪತ್ರದಲ್ಲಿ ಬರೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಿಂಗ್ ಅವರಿಗೆ ಈ ಹಿಂದೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ನಂತರ ಹಿಂಪಡೆಯಲಾಗಿತ್ತು ಎಂದು ಹೇಳಿದರು.

ಗುರುದ್ವಾರದ ಬಳಿ ಇರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.