ನವದೆಹಲಿ: ವ್ಯಕ್ತಿಯ ತಲೆ ಕತ್ತರಿಸಿ, ದೇಹವನ್ನು ತುಂಡು ಮಾಡಿ. ಈ ಭಯಾನಕ ಕೃತ್ಯದ ವಿಡಿಯೊವನ್ನು ಚಿತ್ರೀಕರಿಸಿ ಪಾಕಿಸ್ತಾನದ ತಮ್ಮ ನಿರ್ವಾಹಕನಿಗೆ ಕಳುಹಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಹತ್ಯೆಯಾದ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ತ್ರಿಶೂಲದ ಹಚ್ಚೆ ಇರುವ ವ್ಯಕ್ತಿಯ ಕತ್ತರಿಸಿದ ಕೈ, ಪೊಲೀಸರಿಗೆ ಸಿಕ್ಕಿದೆ.

ಬಂಧಿತರಲ್ಲಿ ಒಬ್ಬನಾದ ನೌಶದ್‌ಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್ ಉಲ್ ಅನ್ಸಾರ್‌ನ ಕಾರ್ಯನಿರ್ವಾಹಕ ಸೊಹೈಲ್ ಎಂಬಾತ ಪ್ರಭಾವಿ ಹಿಂದೂಗಳನ್ನು ಕೊಲ್ಲುವ ಆದೇಶ ನೀಡಿದ್ದ ಎಂದು ವರದಿ ತಿಳಿಸಿದೆ.

ಬಂಧಿತ ಮತ್ತೊಬ್ಬ ಆರೋಪಿ ಜಗಜೀತ್ ಸಿಂಗ್‌ಗೆ ಖಲಿಸ್ತಾನ್ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳನ್ನು ಭಾರತದಲ್ಲಿ ಪ್ರಚುರಪಡಿಸಲು ಆದೇಶಿಸಲಾಗಿತ್ತು. ಜಗಜೀತ್ ಸಿಂಗ್, ಕೆಡಾದಲ್ಲಿರುವ ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ದಲ್ಲಾನ ಸಂಪರ್ಕದಲ್ಲಿದ್ದ ಎಂಬ ಆರೋಪ ಕೇಳಿಬಂದಿದೆ.

ಬಂಧಿತ ಇಬ್ಬರು ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಡಿಸೆಂಬರ್ 14ರ ರಾತ್ರಿ ಈಶಾನ್ಯ ದೆಹಲಿಯ ಭಲ್ಸ್ವಾ ಡೈರಿ ಬಳಿ ಇರುವ ನೌಶದ್ ಮನೆಗೆ ವ್ಯಕ್ತಿಯನ್ನು ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದೆವು. ಬಳಿಕ, ಆತನ ಮೃತದೇಹವನ್ನು 8 ತುಂಡುಗಳಾಗಿ ಕತ್ತರಿಸಿ ಅದರ ವಿಡಿಯೊ ಚಿತ್ರೀಕರಿಸಿ ಸೊಹೈಲ್‌ಗೆ ಕಳುಹಿಸಿದೆವು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.