ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಡುತ್ತಿದ್ದವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮಾ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಈ ಬಾರಿ ವರ್ಮಾ ಅವರು ಮುಸ್ಲಿಮರು ನವಾಜ್ ಮಾಡುತ್ತಿರುವ ಹಳೇ ವಿಡಿಯೊವೊಂದನ್ನು ಟ್ವೀಟಿಸಿ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು ಇದು ತಪ್ಪು.ವದಂತಿ ಹಬ್ಬಿಸುವುದಕ್ಕಾಗಿ ಹಳೇ ವಿಡಿಯೊವನ್ನು ಬಳಸಲಾಗಿದೆ. ಪೋಸ್ಟ್ ಮಾಡುವ ಮುನ್ನ ದೃಢೀಕರಿಸಿ, ವದಂತಿ ಹಬ್ಬಿಸಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ ಕೂಡಲೇ ವರ್ಮಾ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ:ಕಾಶ್ಮೀರದ ಪರಿಸ್ಥಿತಿ ದೆಹಲಿಗೂ ಬಂದೀತು ಜೋಕೆ: ಬಿಜೆಪಿ ಸಂಸದ ಪರ್ವೇಶ್ ವರ್ಮಾ

ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹೀಬ್ ಸಿಂಗ್ ವರ್ಮಾ ಪುತ್ರ, ಸಂಸದ ಪರ್ವೇಶ್ ವರ್ಮಾ ಗುರುವಾರ ವಿಡಿಯೊವೊಂದನ್ನು ಟ್ವೀಟಿಸಿದ್ದು, ಕೋವಿಡ್-19 ಪಿಡುಗು ಕಾಲದಲ್ಲಿ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಉಲ್ಲಂಘಿಸಿ ಯಾವುದಾದರೂ ಧರ್ಮಗಳು ಈ ರೀತಿ ಮಾಡುತ್ತವೆಯೇ ಎಂದಿದ್ದರು. ಅದೇ ವೇಳೆ ಮುಸ್ಲಿಂ ಪಂಡಿತರ ಸಂಬಳ ಏರಿಕೆ ಮಾಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ ವರ್ಮಾ, ಅವರ ಸಂಬಳ ಕಡಿಮೆ ಮಾಡುವಂತೆ ಸವಾಲು ಹಾಕಿದ್ದರು.

ವರ್ಮಾ ಪೋಸ್ಟ್ ಮಾಡಿರುವ ವಿಡಿಯೊ ಮಾರ್ಚ್ 20ರದ್ದು. ಅಂದರೆ ಲಾಕ್‍ಡೌನ್ ಘೋಷಿಸುವ ಮುನ್ನ ತೆಗೆದ ವಿಡಿಯೊ ಎಂದು ಫ್ಯಾಕ್ಟ್‌ಚೆಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್ ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.