ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಇಳಿಕೆಯಾಗಿದ್ದು, ದಟ್ಟ ಮಂಜಿನ ಪರದೆ ಆವರಿಸಿಕೊಂಡಿದೆ. ಇದರಿಂದಾಗಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ವ್ಯತ್ಯಯವಾಗಿದೆ. ಸುಮಾರು 18 ರೈಲುಗಳ ಕಾರ್ಯಾಚರಣೆ ವಿಳಂಬವಾಗಿದೆ.
.ದೆಹಲಿ ಆಸ್ಪತ್ರೆಗಳಿಗೆ ಕಳಪೆ ಔಷಧ ಪೂರೈಕೆ: ಸಿಬಿಐ ತನಿಖೆಗೆ ಆದೇಶ.
ಕರ್ತವ್ಯ ಪಥದಲ್ಲಿ ದಟ್ಟ ಮಂಜಿನ ನಡುವೆಯೇ ಗಣರಾಜ್ಯೋತ್ಸವದ ಪೂರ್ವಾಭ್ಯಾಸ ನಡೆಯಿತು. ಚಳಿಗಾಳಿ ಹಾಗೂ ಮಂಜಿನಿಂದಾಗಿ ಜನ ಬೆಂಕಿಯ ಶಾಖದಲ್ಲಿ ಮೈ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದವು.

ಬೆಳಿಗ್ಗೆ 8 ಗಂಟೆಯಾದರೂ ಕೂಡ ಮಂಜಿನ ಪರದೆ ಸರಿಯದಿದ್ದರಿಂದ, ಜನರ ದೈನಂದಿನ ಚುಟುವಟಿಕೆಗಳಿಗೆ ತೊಂದರೆಯಾದವು. ವಾಹನ ಸವಾರರು ಪರದಾಡುವಂತಾಯಿತು.
.ದೆಹಲಿ | ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಅಪಾರ ಹಾನಿ.
ವಿಮಾನ ಸಂಚಾರದಲ್ಲಿ ವಿಳಂಬವಾಗಿದ್ದರಿಂದ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿರು ತೊಂದರೆ ಅನುಭವಿಸಿದರು. 2–3 ಗಂಟೆಗೂ ಅಧಿಕ ಹೊತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಹವಾಮಾನ ವೈಪರೀತ್ಯದಿಂದ ವಿಮಾನಗಳ ಕಾರ್ಯಾಚರಣೆಗೆ ತೊಂದರೆಯಾಗಿದ್ದು, ದೆಹಲಿ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸಲಹೆಯನ್ನು ಬಿಡುಗಡೆ ಮಾಡಿದೆ.

‘ದಟ್ಟ ಮಂಜಿನಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಸಮಸ್ಯೆ ಉಂಟಾಗಿದೆ. ವಿಮಾನದ ಮಾಹಿತಿಗಾಗಿ ಪ್ರಯಾಣಿಕರು ಏರ್‌ಲೈನ್ಸ್ ಅನ್ನು ಸಂಪರ್ಕಿಸಲು ಕೋರಲಾಗಿದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.