ನವದೆಹಲಿ: ಬೆಂಗಳೂರು ಸೇರಿ ದೇಶದ 42 ನಗರಗಳಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಡಿ (ರೇರಾ) ನೋಂದಣಿಯಾಗಿರುವ ಸುಮಾರು 2 ಸಾವಿರ ವಸತಿ ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ 5.08 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ದತ್ತಾಂಶ ವಿಶ್ಲೇಷಣಾ ಸಂಸ್ಥೆ ಪ್ರಾಪ್ ಈಕ್ವಿಟಿ ವರದಿ ತಿಳಿಸಿದೆ.

ಡೆವಲಪರ್‌ಗಳು ಮನೆ ಖರೀದಿ ದಾರರಿಂದ ಪಡೆದ ಹಣದ ನಿರ್ವಹಣೆ ಯಲ್ಲಿ ಲೋಪ ಎಸಗಿರುವುದೇ ಯೋಜನೆಗಳ ಸ್ಥಗಿತಕ್ಕೆ ಮೂಲ ಕಾರಣವಾಗಿದೆ. ಸಕಾಲದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವು ಅವರಲ್ಲಿ ಕಡಿಮೆಯಿದೆ ಎಂದು ತಿಳಿಸಿದೆ.

ಟೈರ್ 1 ವ್ಯಾಪ್ತಿಯ 14 ನಗರಗಳಲ್ಲಿ 1,636 ಯೋಜನೆಗಳು ಸ್ಥಗಿತಗೊಂಡಿದ್ದು, ಒಟ್ಟು 4.31 ಲಕ್ಷ ಮನೆಗಳು ಅಪೂರ್ಣಗೊಂಡಿವೆ. ಟೈರ್ 2 ನಗರಗಳಲ್ಲಿ 76,256 ಮನೆಗಳ ನಿರ್ಮಾಣ ಸ್ಥಗಿತಗೊಂಡಿದೆ ಎಂದು ತಿಳಿಸಿದೆ.

2018ರಲ್ಲಿ 4.65 ಲಕ್ಷ ಮನೆಗಳ ನಿರ್ಮಾಣ ಸ್ಥಗಿತಗೊಂಡಿತ್ತು. ಈಗ ಅವುಗಳ ಸಂಖ್ಯೆ 5.08 ಲಕ್ಷಕ್ಕೆ ಮುಟ್ಟಿದೆ ಎಂದು ವಿವರಿಸಿದೆ.

‘ಬಹಳಷ್ಟು ಡೆವಲಪರ್‌ಗಳಿಗೆ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವಿಲ್ಲ. ಗ್ರಾಹಕರಿಂದ ಮುಂಗಡವಾಗಿ ಪಡೆದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದಾರೆ. ಈ ಹಣವನ್ನು ಹೊಸದಾಗಿ ಜಮೀನು ಖರೀದಿಸಲು ಅಥವಾ ಸಾಲ ಮರುಪಾವತಿಗೆ ಬಳಕೆ ಮಾಡಿದ್ದಾರೆ’ ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸಮೀರ್ ಜಸುಜಾ ಹೇಳಿದ್ದಾರೆ.

ಇದರಿಂದ ಮನೆ ಖರೀದಿದಾರರಿಗೆ ತೊಂದರೆಯಾಗಿದೆ. ನಿಗದಿತ ಅವಧಿಯೊಳಗೆ ಡೆವಲಪರ್‌ಗಳಿಗೆ ಯೋಜನೆಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯವಿದೆಯೇ ಎಂಬ ಬಗ್ಗೆ ಖರೀದಿದಾರರಿಗೆ ತಿಳಿಸುವ ಕೆಲಸ ಆಗಬೇಕಿದೆ. ಈ ಬಗ್ಗೆ ಸ್ವತಂತ್ರವಾಗಿ ಮೂರನೇ ವ್ಯಕ್ತಿಯಿಂದ ಯೋಜನೆಗಳ ಬಗ್ಗೆ ಆಡಿಟ್ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ 225 ವಸತಿ ನಿರ್ಮಾಣ ಯೋಜನೆಗಳು ಸ್ಥಗಿತ ಗೊಂಡಿವೆ. ಒಟ್ಟು 39,908 ಮನೆಗಳು ಅಪೂರ್ಣಗೊಂಡಿದ್ದು, ಹಣ ಪಾವತಿಸಿರುವ ಗ್ರಾಹಕರಿಗೆ ಇನ್ನೂ ಹಸ್ತಾಂತರವಾಗಿಲ್ಲ.

ನೋಯ್ಡಾದಲ್ಲಿ 74,645, ಗುರುಗ್ರಾಮ 52,509, ಗಾಜಿಯಾಬಾದ್ 15,278, ಮುಂಬೈ 37,883, ಥಾಣೆ 57,520 ಮತ್ತು ಪುಣೆಯಲ್ಲಿ 24,129 ಮನೆಗಳ ನಿರ್ಮಾಣ ಸ್ಥಗಿತಗೊಂಡಿದೆ.

ವ್ಯಾಜ್ಯ ಹೆಚ್ಚಳ: ದೇಶದ ವಿವಿಧ ನ್ಯಾಯಾಲಯಗಳಲ್ಲಿ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ದಾವೆಗಳ ಸಂಖ್ಯೆ ಹೆಚ್ಚುತ್ತಿದೆ. ಮನೆ ಖರೀದಿಗೂ ಮೊದಲು ಖರೀದಿದಾರರು ಸ್ಥಗಿತಗೊಂಡಿರುವ ಪ್ರಾಜೆಕ್ಟ್‌ಗಳ ಬಗ್ಗೆ ತಿಳಿದುಕೊಳ್ಳಬೇಕು. ವೃತ್ತಿಪರ ತಜ್ಞರ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಮೀರ್ ಜಸುಜಾ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.