ಮುಂಬೈ: ’ಜನರ ಆಶೀರ್ವಾದ ಮಾತ್ರ ನನ್ನನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬಲ್ಲದು’ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಹೇಳಿದರು.

ಮರಾಠಿಯಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸಾಮಾಜಿಕ ಕಾರ್ಯಕರ್ತೆ, ತಮ್ಮ ಪತ್ನಿ ಅಮೃತಾ ಅವರೊಂದಿಗೆ ಭಾಗವಹಿಸಿದ್ದ ಫಡಣವೀಸ್ ಅವರಿಗೆ ಅವರ ಹಿಂದಿನ ಚುನಾವಣೆ ಘೋಷ ವಾಕ್ಯ ’ನಾನು ಮತ್ತೊಮ್ಮೆ ಅಧಿಕಾರಕ್ಕೆ ಬರುವೆ‘ ಎಂಬುದರ ಬಗ್ಗೆ ಕೇಳಲಾಯಿತು.

ಕನ್ನಡಿಗರೇ ಹೆಚ್ಚಾಗಿರುವ ಪ್ರದೇಶಗಳು ಮಹಾರಾಷ್ಟ್ರದಲ್ಲೂ ಇವೆ: ಎಚ್ಡಿಕೆ ತಿರುಗೇಟು

ಇದಕ್ಕೆ ಪ್ರತಿಕ್ರಿಯಿಸಿದ ಅವರು, ’ನಾನು ಹಲವು ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಮತ್ತೆ ಅಧಿಕಾರ ಬರುವೆ ಎಂದು ಹೇಳಿದ್ದೆ, ಆದರೆ ಕೆಲವರು ನನ್ನ ದಾರಿಗೆ ಅಡ್ಡಿಯಾದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ವಿರುದ್ಧ ಪರೋಕ್ಷವಾಗಿ ಟೀಕಿಸಿದರು. ಅಲ್ಲದೆ ಪುನಃ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದೂ ಹೇಳಿದರು.

2019ರ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ’ನಾನು ಮತ್ತೊಮ್ಮೆ ಅಧಿಕಾರಕ್ಕೆ ಬರುವೆ‘ ಎನ್ನುವ ಅವರ ಘೋಷಣೆ ಜನಪ್ರಿಯವಾಗಿತ್ತು.

ಮರಾಠಿಗರಿರುವ ಕನ್ನಡ ನೆಲ ಮಹಾರಾಷ್ಟ್ರಕ್ಕೆ ಸೇರ್ಪಡೆ ಹೋರಾಟಕ್ಕೆ ಬೆಂಬಲ: ಪವಾರ್

ಬಿಜೆಪಿ ಮೈತ್ರಿ ತೊರೆದ ಶಿವಸೇನಾ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆಗೂಡಿ ಮಹಾವಿಕಾಸ ಅಘಾಡಿ ಸರ್ಕಾರ ರಚಿಸುವ ಮೂಲಕ ಫಡಣವೀಸ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸಿಗೆ ತಣ್ಣೀರು ಎರಚಿತ್ತು.ಫಡಣವೀಸ್ ಎರಡು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.