ರಾಯ್ಪುರ್: ನಮ್ಮ ದೇಶದಲ್ಲಿರುವ ಇಥೆನಾಲ್ ಘಟಕಗಳು ಗರಿಷ್ಠ ಉತ್ಪಾದನೆ ಮಾಡಿದರೆ ಮತ್ತು ಪರ್ಯಾಯ ಇಂಧನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿದರೆ ಡೀಸೆಲ್ ಬೆಲೆ ಲೀಟರ್ಗೆ₹50ಮತ್ತು ಪೆಟ್ರೋಲ್ ಬೆಲೆ ಲೀಟರ್ಗೆ₹55 ಆಗಲು ಸಾಧ್ಯವಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದುರ್ಗ್ ಜಿಲ್ಲೆಯ ಛರೋಡಾದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ನಮ್ಮ ನಮ್ಮ ಪೆಟ್ರೋಲಿಯಂ ಸಚಿವಾಲಯ 5 ಇಥೆನಾಲ್ ಘಟಕಗಳನ್ನು ನಿರ್ಮಿಸಲಿದೆ.ಅಲ್ಲಿ ಭತ್ತದ, ಗೋಧಿ, ಕಬ್ಬು ಮತ್ತು ಕಸದಿಂದ ಇಂಧನವನ್ನು ಉತ್ಪಾದಿಸಲಾಗುವುದು. ಹೀಗಾದರೆ ಡೀಸೆಲ್ ₹50 ಮತ್ತು ಪೆಟ್ರೋಲ್ ₹55ಕ್ಕೆ ಲಭ್ಯವಾಗಲಿದೆ ಎಂದಿದ್ದಾರೆ.

ಪರ್ಯಾಯ ಇಂಧನಗಳಾದ ಇಥೆನಾಲ್, ಮಿಥೆನಾಲ್, ಜೈವಿಕ ಇಂಧನ ಮತ್ತು ಸಿಎನ್ಜಿ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾದಲ್ಲಿ ಪೆಟ್ರೋಲಿಯಂ ಮೇಲಿನ ಅವಲಂಬನೆ ಕಡಿಮೆಯಾಗಿ ಪೆಟ್ರೋಲ್, ಡೀಸೆಲ್ ದರಗಳು ಇಳಿಯಲಿವೆ.
ಜೈವಿಕ ಇಂಧನ ಉತ್ಪಾದನೆ ಮಾಡುವ ತಾಕತ್ತು ಛತ್ತೀಸ್ಗಢಕ್ಕೆ ಇದೆ. ಛತ್ತೀಸ್ಗಢದಲ್ಲಿರುವ ಕೃಷಿ ವಲಯದ ಅಭಿವೃದ್ಧಿ ದರ ಉತ್ತಮವಾಗಿದೆ.ಅಕ್ಕಿ, ಗೋಧಿ, ಬೇಳೆ ಮತ್ತು ಕಬ್ಬು ಇಲ್ಲಿ ಯಥೇಚ್ಛವಾಗಿದೆ. ಅದೇ ವೇಳೆ ಈ ರಾಜ್ಯ ಜೈವಿಕ ಇಂಧನ ಉತ್ಪಾದನೆಯ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.