ನವದೆಹಲಿ: ಕೊಳಕು ಸಾರ್ವಜನಿಕ ಶೌಚಾಲಯಗಳು, ಸರಿಯಾಗಿ ನಿದ್ದೆಯಾಗದಿರುವುದು ಮತ್ತು ಸ್ನಾಯುಗಳ ಸೆಳೆತ ಋತುಚಕ್ರದ ವೇಳೆ ಮಹಿಳೆಯರನ್ನು ಕಾಡುವ ಪ್ರಮುಖ ಸಂಗತಿಗಳು ಎಂದು ಅಧ್ಯಯನವೊಂದು ತಿಳಿಸಿದೆ.

ಮೇ 28ರ ‘ಮುಟ್ಟಿನ ನೈರ್ಮಲ್ಯ ದಿನ’ದ ಅಂಗವಾಗಿ ಫೆಮಿನೈನ್ ಹೈಜಿನ್ ಬ್ರಾಂಡ್ ‘ಎವರ್ಟೀನ್’ ಈ ಸಮೀಕ್ಷೆ ನಡೆಸಿದೆ. ಇದರಲ್ಲಿ 35 ನಗರಗಳ 18–35 ವರ್ಷ ವಯೋಮಾನದ ಸುಮಾರು 6,000 ಮಹಿಳೆಯರು ಪಾಲ್ಗೊಂಡಿದ್ದರು.

ಶೇ 62.2ರಷ್ಟು ಮಹಿಳೆಯರು ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್ ಬದಲಾಯಿಸುವುದೇ ಇಲ್ಲ ಎಂದು ತಿಳಿಸಿದ್ದಾರೆ. ಶೇ 74.6ರಷ್ಟು ಮಹಿಳೆಯರು ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್ ಬದಲಾಯಿಸುವ ಅಗತ್ಯಬಿದ್ದರೆ ಇರಿಸುಮುರಿಸು ಅನುಭವಿಸುವುದಾಗಿ ತಿಳಿಸಿದ್ದಾರೆ.

ಶೇ 88.3ರಷ್ಟು ಮಂದಿ ಸಾರ್ವಜನಿಕ ಶೌಚಾಲಯಗಳು ಗುಪ್ತಾಂಗ ಸೋಂಕಿಗೆ ಮೂಲ ಕಾರಣ ಎಂದು ಭಾವಿಸಿದ್ದಾಗಿ ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಈ ಪೈಕಿ ಶೇ 53.2ರಷ್ಟು ಮಹಿಳೆಯರು ಮುಟ್ಟಾದ ಮೊದಲ 2 ದಿನ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಶೇ 67.5ರಷ್ಟು ಮಹಿಳೆಯರು ನಿದ್ದೆ ಮಾಡುವಾಗ ಮುಟ್ಟಿನ ಕಲೆ ಕಾಣುತ್ತದೆ ಎಂಬ ಆತಂಕವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಶೇ 57.3ರಷ್ಟು ಮಹಿಳೆಯರು ಋತುಚಕ್ರದ ವೇಳೆ ತೀವ್ರ ಅಥವಾ ಸೌಮ್ಯ ಸ್ವರೂಪದ ಸ್ನಾಯು ಸೆಳೆತ ಕಾಡುತ್ತದೆ ಎಂದರೆ, ಶೇ 37.2 ರಷ್ಟು ಮಂದಿ ಆಗಾಗ ಸೌಮ್ಯ ಸ್ವರೂಪದಲ್ಲಿ ಮುಟ್ಟಿನ ನೋವು ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.