ನವದೆಹಲಿ: ದೇಶದಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿರುವುದರಿಂದ ಅದನ್ನು ಕೊಳ್ಳುವುದಕ್ಕೆ, ಬಳಸುವುದಕ್ಕೆ ಅನೇಕ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಕೇವಲ ಗ್ರಾಹಕರು, ಸಣ್ಣಪುಟ್ಟ ಹೋಟೆಲ್ಗಳಿಗೆ ಈ ಬಿಸಿ ತಟ್ಟಿಲ್ಲ. ಪಿಜ್ಜಾ ಆಹಾರ ಉತ್ಪನ್ನಗಳನ್ನು ತಯಾರಿಸುವ ಪ್ರತಿಷ್ಠಿತ ಕಂಪನಿ ಮೆಕ್ಡೋನಾಲ್ಡ್ಸ್ಗೂ (McDonalds) ಬೆಲೆ ಏರಿಕೆ ಬಿಸಿ ಮುಟ್ಟಿದೆ.

ಪಿಜ್ಜಾ ಸೇರಿದಂತೆ ನಮ್ಮ ಆಹಾರ ಉತ್ಪನ್ನಗಳಲ್ಲಿ ಟೊಮೆಟೊಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಮೆಕ್ಡೋನಾಲ್ಡ್ಸ್ ದೆಹಲಿಯ ತನ್ನ ಮಳಿಗೆಗಳ ಹೊರಗೆ ಫಲಕಗಳನ್ನು ಹಾಕಿಕೊಂಡಿದೆ.

ಟೊಮೆಟೊ ಬೆಲೆ ಏರಿಕೆಯನ್ನು ಪ್ರಸ್ತಾಪಿಸದೇ ಈ ವಿಚಾರ ಹೇಳಿರುವ ಮೆಕ್ಡೋನಾಲ್ಡ್ಸ್, ಪ್ರಿಯ ಗ್ರಾಹಕರೇ ನಾವು ನಿಮಗೆ ಉತ್ತಮ ಆಹಾರ ಪದಾರ್ಥಗಳನ್ನು ನೀಡುವಲ್ಲಿ ಯಾವಾಗಲೂ ಬದ್ಧರಾಗಿದ್ದೇವೆ. ನಮ್ಮ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟದ ಟೊಮೆಟೊಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯ ಟೊಮೆಟೊ ಇಲ್ಲದೇ ಆಹಾರ ಉತ್ಪನ್ನಗಳನ್ನು ನೀಡುತ್ತೇವೆ ಎಂದು ಹೇಳಿದೆ.

ಮೆಕ್ಡೋನಾಲ್ಡ್ಸ್ ಉತ್ತರ ಭಾರತ, ಈಶಾನ್ಯ ಭಾರತದ ತನ್ನ ಮಳಿಗೆಗಳಲ್ಲಿ ಟೊಮೆಟೊಗಳನ್ನು ಬಳಸುವುದನ್ನು ಸದ್ಯ ತಡೆಹಿಡಿದಿದೆ.

ಉತ್ತರಾಖಂಡದಲ್ಲಿ ಕೆ.ಜಿ. ಟೊಮೆಟೊ ಬೆಲೆ ₹250ವರೆಗೂ ಇದ್ದರೆ, ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ₹120 ರಿಂದ ₹150ವರೆಗೆ ಮಾರಾಟವಾಗುತ್ತಿದೆ.

ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ₹85 ರಿಂದ ₹120ವರೆಗೆ ಟೊಮೆಟೊ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರು, ಹೋಟೆಲ್ ಉದ್ಯಮಿಗಳು ಕಂಗಾಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.