ಬೆಂಗಳೂರು: ದೋಹಾದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದಿಳಿದ ಕೆನ್ಯಾ ದೇಶದ ಯುವಕನೊಬ್ಬನನ್ನು ಬಂಧಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಬೆಂಗಳೂರು ವಲಯ ಘಟಕದ ಅಧಿಕಾರಿಗಳು, ₹ 30 ಕೋಟಿ ಮೌಲ್ಯದ 3 ಕೆ.ಜಿ. ಕೊಕೇನ್ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ.

ಕೆನ್ಯಾ ದೇಶದ ಪ್ರಜೆಯಾಗಿರುವ 24 ವರ್ಷದ ಯುವಕ ಲಗೇಜು ಚೀಲದಲ್ಲಿ ಕೊಕೇನ್ ಕಳ್ಳಸಾಗಣೆ ಮಾಡುತ್ತಿರುವ ಮಾಹಿತಿ ಡಿಆರ್ಐ ಅಧಿಕಾರಿಗಳಿಗೆ ಲಭಿಸಿತ್ತು. ತೀವ್ರ ನಿಗಾ ಇರಿಸಿದ್ದ ತನಿಖಾ ಸಂಸ್ಥೆಯ ಅಧಿಕಾರಿಗಳು, ದೋಹಾದಿಂದ ಬೆಂಗಳೂರಿಗೆ ಬಂದ ಇಂಡಿಗೋ ಏರ್ಲೈನ್ಸ್ ವಿಮಾನ ನಿಲ್ದಾಣದಲ್ಲಿದ್ದ ಯುವಕನನ್ನು ಬಂಧಿಸಿದ್ದಾರೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಆರೋಪಿಯು ಲಗೇಜು ಚೀಲದ ಅಡಿಭಾಗದಲ್ಲಿ ಮಾದಕವಸ್ತುವನ್ನು ಬಚ್ಚಿಟ್ಟಿದ್ದ. ಬ್ಯಾಗ್ ಅನ್ನು ತೀವ್ರ ತಪಾಸಣೆ ನಡೆಸಿದಾಗ ಬಿಳಿಬಣ್ಣದ ಪುಡಿಯ ಪೊಟ್ಟಣಗಳು ಪತ್ತೆಯಾದವು. ಅವುಗಳನ್ನು ಪ್ರಯೋಗಾಲಯದ ಕಿಟ್ ಬಳಸಿ ಪರೀಕ್ಷಿಸಿದಾಗ ಪೊಟ್ಟಣದಲ್ಲಿದ್ದ ಪುಡಿ ಕೊಕೇನ್ ಎಂಬುದು ದೃಢಪಟ್ಟಿದೆ ಎಂದು ಡಿಆರ್ಐ ಮೂಲಗಳು ಹೇಳಿವೆ.

ಮಾದಕವಸ್ತು ನಿಯಂತ್ರಣ ಕಾಯ್ದೆ-1985ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.