ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂರು ಪ್ರಮುಖ ಸ್ಥಾನಗಳಲ್ಲಿ ಜಯ ಸಾಧಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಒಂದು ಸ್ಥಾನ ಜಯಿಸಿದೆ.

ಅಧ್ಯಕ್ಷ, ಕಾರ್ಯಕದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಎಬಿವಿಪಿ ಗೆದ್ದಿದೆ. ಉಪಾಧ್ಯಕ್ಷ ಹುದ್ದೆ ಎನ್ಎಸ್ಯುಐ ಪಾಲಾಗಿದೆ. ಎಬಿವಿಪಿಯ ತುಷಾರ್ ದೆಢಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಭಿ ದಾಹಿಯಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಪರಾಜಿತಾ ಮತ್ತು ಜಂಟಿ ಕಾರ್ಯದರ್ಶಿಯಾಗಿ ಸಚಿನ್ ಬಸ್ಲಾ ಆಯ್ಕೆಯಾಗಿದ್ದಾರೆ.

ತುಷಾರ್ ಅವರು ಎನ್ಎಸ್ಯುಐನ ಹಿತೇಶ್ ಗುಲಿಯಾ ಅವರನ್ನು ಪರಾಭಗೊಳಿಸಿದರು. ಈ ವರ್ಷ ಒಟ್ಟು 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಎಬಿವಿಪಿ ಮತ್ತು ಎನ್ಎಸ್ಯುಐ ನಡುವೆ ನೇರ ಹಣಾಹಣಿ ನಡೆದಿತ್ತು. ಸಿಪಿಐ(ಎಂಎಲ್) ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟವೂ ಸ್ಪರ್ಧಿಸಿತ್ತು.

ಒಟ್ಟು ಒಂದು ಲಕ್ಷ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದಿದ್ದರು. 52 ಕಾಲೇಜುಗಳಲ್ಲಿ ಮತದಾನ ನಡೆದಿತ್ತು. ಶೇ 42ರಷ್ಟು ಮತದಾನವಾಗಿತ್ತು ಎಂದು ಚುನಾವಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

ಎರಡು ವರ್ಷಗಳ ಬಳಿಕ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟಕ್ಕೆ ಸೆ. 22ರಂದು ಚುನಾವಣೆ ನಡೆದಿತ್ತು. ಕೋವಿಡ್–19 ಕಾರಣದಿಂದಾಗಿ 2020 ಹಾಗೂ 2021ರಂದು ಚುನಾವಣೆ ನಡೆದಿರಲಿಲ್ಲ.

ಶುಲ್ಕ ಹೆಚ್ಚಳ, ಅಗ್ಗದ ದರಕ್ಕೆ ಹಾಸ್ಟೆಲ್ ಸೌಕರ್ಯ, ಕಾಲೇಜು ಕಾರ್ಯಕ್ರಮಗಳಲ್ಲಿ ಭದ್ರತೆ ಹೆಚ್ಚಿಸುವುದು ಮತ್ತು ಮುಟ್ಟಿನ ರಜೆ ಪ್ರಮುಖ ಚುನಾವಣಾ ವಿಷಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.