ನವದೆಹಲಿ: ಹಿಂದಿನ ಕಾಲದಲ್ಲಿ ಮೊಬೈಲ್ ಫೋನ್ ಸ್ಕ್ರೀನ್ ಫ್ರೀಜ್ ಆಗುತ್ತಿದ್ದಂತೆ, ಅಂದಿನ ಸರ್ಕಾರಗಳು ಫ್ರೀಜ್ ಆಗಿದ್ದವು. ಈಗ ಅವು ಹಳತಾಗಿವೆ ಎಂದು ಹಿಂದಿನ ಸರ್ಕಾರಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

7ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, '10-12 ವರ್ಷಗಳ ಹಿಂದೆ, ಮೊಬೈಲ್ ಫೋನ್ ಪರದೆ ಹೇಗೆ ನಿಷ್ಕ್ರಿಯಗೊಳ್ಳುತ್ತಿತ್ತು ಎಂಬುದನ್ನು ನೀವು ನೋಡಿರಬೇಕು. ಹಿಂದಿನ ಸರ್ಕಾರಗಳಂತೆಯೇ ಪರಿಸ್ಥಿತಿ ಇತ್ತು. ಆದರೆ ಅವುಗಳು ಈಗ ಸ್ಥಗಿತಗೊಂಡಿವೆ. ಅವುಗಳನ್ನು ಪುನಃ ಪ್ರಾರಂಭಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ವಿಶ್ವದ 2ನೇ ಅತಿದೊಡ್ಡ ಮೊಬೈಲ್ ತಯಾರಕ:

2014ರ ನಂತರ ನಾವು ಅಧಿಕಾರಕ್ಕೆ ಬಂದಿದ್ದೇವೆ. ಜನರು ಹಳೆಯ ತಂತ್ರಜ್ಞಾನಗಳನ್ನು ಬಳಸುವುದನ್ನು ನಿಲ್ಲಿಸಿದರು. ಈ ಹಿಂದೆ ಭಾರತ ಮೊಬೈಲ್ ಫೋನ್‌ಗಳ ಆಮದುದಾರನಾಗಿತ್ತು. ಆದರೆ ಈಗ ಅದು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ತಯಾರಕನಾಗಿ ಹೊರಹೊಮ್ಮಿದೆ.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಬಂದಾಗ ದೂರದೃಷ್ಟಿಯ ಕೊರತೆಯಿತ್ತು. ಆದರೆ ಇಂದು ಸುಮಾರು 2 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ದೇಶದಲ್ಲಿ ತಯಾರಿಸಲಾಗುತ್ತದೆ. ತಂತ್ರಜ್ಞಾನದ ಪ್ರಯೋಜನ ಪ್ರತಿಯೊಬ್ಬರಿಗೂ ತಲುಪಬೇಕು. ಪ್ರತಿಯೊಬ್ಬರು ಸಂಪನ್ಮೂಲಗಳ ಪ್ರಯೋಜನ ಪಡೆಯಬೇಕು ಎಂಬ ರೀತಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
.India Mobile Congress: ಜಿಯೊದಿಂದ ದೇಶದ ಮೊದಲ ಉಪಗ್ರಹ ಆಧಾರಿತ ಗಿಗಾ ಫೈಬರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.