ಮುಂಬೈ: ಕೆನರಾ ಬ್ಯಾಂಕ್‌ನ ₹ 538 ಕೋಟಿ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೆಟ್ ಏರ್‌ವೇಸ್ ಸ್ಥಾಪಕ ನರೇಶ್ ಗೋಯಲ್ ಅವರನ್ನು ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಂಎಲ್ಎ ಕಾಯ್ದೆಯಡಿ ಅವರನ್ನು ವಶಕ್ಕೆ ಪಡೆದು ಸುದೀರ್ಘ ಅವಧಿಗೆ ವಿಚಾರಣೆಗೆ ಒಳಪಡಿಸಲಾಗಿತ್ತು. 74 ವರ್ಷದ ಗೋಯಲ್ ಅವರನ್ನು ಇಲ್ಲಿನ ಪಿಎಂಎಲ್‌ಎ ವಿಶೇಷ ಕೋರ್ಟ್‌ನಲ್ಲಿ ಶನಿವಾರ ಹಾಜರುಪಡಿಸಿ ವಶಕ್ಕೆ ಒಪ್ಪಿಸಲು ಕೋರಲಾಗುವುದು ಎಂದು ತಿಳಿಸಿವೆ.

ಗೋಯಲ್, ಅವರ ಪತ್ನಿ ಅನಿತಾ, ಹಾಗೂ ಕಂಪನಿ ಕೆಲ ಮಾಜಿ ಸಿಬ್ಬಂದಿಯ ವಿರುದ್ಧ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಸಿಬಿಐ ಮೊಕದ್ದಮೆಯನ್ನು ದಾಖಲಿಸಿತ್ತು. ಬ್ಯಾಂಕ್ ಈ ಸಂಬಂಧ ದೂರು ದಾಖಲಿಸಿತ್ತು.

ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಯು ಬ್ಯಾಂಕ್‌ನಿಂದ ಒಟ್ಟು 848.86 ಕೋಟಿ ಸಾಲ ಪಡೆದಿದ್ದು, ಈ ಪೈಕಿ ಇನ್ನೂ 538.62 ಕೋಟಿ ಬಾಕಿ ಉಳಿದಿದೆ ಎಂದು ತಿಳಿಸಿತ್ತು. ಇದನ್ನು ವಂಚನೆ ಖಾತೆಯಾಗಿ ಜುಲೈ 29, 2011ರಲ್ಲಿ ಸಿಬಿಐ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.