ನವದೆಹಲಿ: ₹11 ಸಾವಿರ ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿದ 9 ಐಷಾರಾಮಿ ಕಾರು ಹಾಗೂ ₹94.52 ಕೋಟಿ ಮೊತ್ತದ ಷೇರು, ಮ್ಯೂಚುವಲ್ ಫಂಡ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ತಿಳಿಸಿದೆ.

ಈ ಪೈಕಿ ನೀರವ್ಗೆ ಸೇರಿದ ₹7.8 ಕೋಟಿ ಹಾಗೂ ಚೋಕ್ಸಿಗೆ ಸೇರಿದ ₹86.72 ಕೋಟಿ ಮೌಲ್ಯದ ಷೇರು, ಮ್ಯೂಚುವಲ್ ಫಂಡ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಟ್ವೀಟ್ ಮಾಡಿದೆ.

₹81.16 ಕೋಟಿ ಮೌಲ್ಯದ ವರ್ಲಿಯ ಪೆಂಟ್ ಹೌಸ್, ಪೆನಿನ್ಸುಲಾ ಬ್ಯುಸಿನೆಸ್ ಪಾರ್ಕ್ನಲ್ಲಿರುವ ₹79.18 ಕೋಟಿಯ 2 ಕಚೇರಿ ಜಾಗ, ₹42.70 ಕೋಟಿಯ ಅಲಿಬಾಗ್ನ ಫಾರ್ಮ್ಹೌಸ್ ಅನ್ನೂ ಜಪ್ತಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.