ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ಜಾರಿಗೊಳಿಸಿದ್ದು, ಅಕ್ಟೋಬರ್ 18ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಾಯಕ ಇಕ್ಬಾಲ್ ಮಿರ್ಚಿ ಹಾಗೂ ಪ್ರಫುಲ್ ಕುಟುಂಬದ ನಡುವೆ ವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಆದರೆ ಇದನ್ನು ತಳ್ಳಿಹಾಕಿರುವ ಪ್ರಫುಲ್ ಪಟೇಲ್, ‘ನನ್ನ ಮತ್ತು ಮಿರ್ಚಿ ನಡುವೆ ಒಂದೇ ಒಂದು ಪೈಸೆಯ ವ್ಯವಹಾರವೂ ನಡೆದಿಲ್ಲ’ ಎಂದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಇ.ಡಿ. ಸಮನ್ಸ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಇದು ‘ದೇಶದ್ರೋಹಕ್ಕೆ ಕಡಿಮೆಯಲ್ಲದ ಕೃತ್ಯ’ ಎಂದಿದ್ದಾರೆ. ಈ ಹಿಂದೆ ಏರ್ ಇಂಡಿಯಾ ಪ್ರಕರಣದಲ್ಲಿ ಇ.ಡಿ ವಿಚಾರಣೆಗೆ ಪ್ರಫುಲ್ ಪಟೇಲ್ ಹಾಜರಾಗಿದ್ದರು.

ಹಿನ್ನೆಲೆ: ಪಟೇಲ್ಗೆ ಕುಟುಂಬಕ್ಕೆ ಸೇರಿದ ಮಿಲೇನಿಯಂ ಡೆವಲಪರ್ಸ್ ಪ್ರೈ. ಲಿ. ಸಂಸ್ಥೆಯು 2006–07ರಲ್ಲಿ ಮುಂಬೈನಲ್ಲಿ ನಿರ್ಮಿಸಿದ್ದ ಸಿಜೆ ಹೌಸ್ ಕಟ್ಟಡದ ಮೂರನೇ ಹಾಗೂ ನಾಲ್ಕನೇ ಮಹಡಿಗಳನ್ನು ಮಿರ್ಜಿಯ ಪತ್ನಿ ಹೆಸರಿಗೆ ವರ್ಗಾಯಿಸಲಾಗಿತ್ತು. ಈ ಕಟ್ಟಡದ ಭೂಮಿಯನ್ನು ಶಂಕಾಸ್ಪದ ರೀತಿಯಲ್ಲಿ ಮಿರ್ಚಿ ಮಿಲೇನಿಯಂ ಡೆವಲಪರ್ಸ್ ಸಂಸ್ಥೆಗೆ ನೀಡಿದ್ದ. ಇದಕ್ಕೆ ಪ್ರತಿಯಾಗಿ ಎರಡು ಮಹಡಿಗಳನ್ನು ನೀಡಲಾಗಿತ್ತು ಎಂದು ಇ.ಡಿ. ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.