ಜೈಪುರ: ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಮಗ ವೈಭವ್ ಗೆಹಲೋತ್ ಅವರಿಗೆ ಜಾರಿ ನಿರ್ದೇಶನಾಲಯ(ಇ.ಡಿ) ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ವೈಭವ್ ಗೆಹಲೋತ್ ಅವರಿಗೆ ಜೈಪುರ ಅಥವಾ ನವದೆಹಲಿಯ ಇ.ಡಿ ಕಚೇರಿಯಲ್ಲಿ ಶುಕ್ರವಾರ ವಿಚಾರಣೆಗೆಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನ ಮೂಲದ ಟ್ರೈಟನ್ ಹೋಟೆಲ್ ಅಂಡ್ ರೆಸಾರ್ಟ್ಸ್, ವಾರ್ಧಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರು ಹಾಗೂ ಪ್ರವರ್ತಕರಾದ ಶಿವಶಂಕರ್ ಶರ್ಮಾ, ರತನ್ ಕಾಂತ್ ಶರ್ಮಾ ಮತ್ತು ಇತರರ ವಿರುದ್ಧ ಇತ್ತೀಚೆಗೆ ಇ.ಡಿ ನಡೆಸಿತ್ತು. ದಾಳಿಗಳಲ್ಲಿ ಪತ್ತೆಯಾದ ಮಾಹಿತಿ ಆಧರಿಸಿ ವೈಭವ್‌ಗೆ ಸಮನ್ಸ್ ನೀಡಲಾಗಿದೆ.

ಆಗಸ್ಟ್ ತಿಂಗಳಲ್ಲಿ ಜೈಪುರ, ಉದಯಪುರ, ಮುಂಬೈ ಮತ್ತು ದೆಹಲಿಯ ಕೆಲವು ಸ್ಥಳಗಳಲ್ಲಿ ಮೂರು ದಿನಗಳ ಕಾಲ ಕಂಪನಿಗಳು ಮತ್ತು ಅದರ ಪ್ರವರ್ತಕರ ಮೇಲೆ ದಾಳಿ ನಡೆದಿತ್ತು.

ವೈಭವ್ ಗೆಹಲೋತ್ ಅವರೊಂದಿಗಿನ ರತನ್ ಕಾಂತ್ ಶರ್ಮಾ ಅವರ ಸಂಪರ್ಕದ ಬಗ್ಗೆ ಜಾರಿ ನಿರ್ದೇಶನಾಲಯ ಪರಿಶೀಲನೆ ನಡೆಸುತ್ತಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸುವ ಮತ್ತು ಹೇಳಿಕೆಯನ್ನು ದಾಖಲಿಸುವ ನಿರೀಕ್ಷೆ ಇದೆ.

ಈ ಶೋಧಗಳ ವೇಳೆ ಇ.ಡಿ ದಾಖಲೆ ಇಲ್ಲದ ₹1.2 ಕೋಟಿ ನಗದನ್ನು ವಶಪಡಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.