ನವದೆಹಲಿ (ಪಿಟಿಐ): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಾಬಲ್ಯ ಇನ್ನಷ್ಟು ಹೆಚ್ಚಿದ್ದು, ಹೊಸದಾಗಿ ರಚನೆಯಾಗಿರುವ ಎಂಟು ಸಂಪುಟ ಸಮಿತಿಗಳಲ್ಲೂ ಅವರು ಸ್ಥಾನ ಪಡೆದಿದ್ದಾರೆ.

ಸರ್ಕಾರ ರಚನೆಯಾದ ವಾರದ ಬಳಿಕ ರಚನೆಯಾದ ಎಂಟು ಸಮಿತಿಗಳ ಪೈಕಿ ಆರರ ನೇತೃತ್ವವನ್ನು ಪ್ರಧಾನಿ ವಹಿಸಿದ್ದರೆ, ಒಂದರ ನೇತೃತ್ವ ಶಾ ವಹಿಸಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಶಾ ಅವರು ಮೋದಿ ನಂತರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ರೂಪುಗೊಂಡಿ ದ್ದಾರೆ ಎಂಬ ಮಾತುಗಳಿಗೆ ಈ ಬೆಳವಣಿ ಗೆಗಳು ಪುಷ್ಟಿ ನೀಡಿದೆ.

ಪ್ರಮುಖ ನೇಮಕಾತಿ ಹಾಗೂ ಇತರ ಬೆಳವಣಿ ಗೆಗಳಿಗೆ ಸಂಬಂಧಿಸಿದಂತೆ ಈ ಸಮಿತಿ ಗಳು ಸರ್ಕಾರಕ್ಕೆ ಅಗತ್ಯ ಸಲಹೆ ನೀಡಲಿದ್ದು, ಆಡಳಿತಾತ್ಮಕವಾಗಿ ಇವು ಬಹುಮುಖ್ಯ ಪಾತ್ರ ವಹಿಸಲಿವೆ.

ನೇಮಕಾತಿ ಸಮಿತಿ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಲಿದ್ದು, ಗೃಹ ಸಚಿವರೂ ಆದ ಅಮಿತ್ ಶಾ ಇದರ ಏಕೈಕ ಸದಸ್ಯ. ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ರಾಜನಾಥ್ ಅವರಿಗೆ ಸಂಸದೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದು ಇತರ ಆರು ಸಮಿತಿಗಳಿಗೆ ಸದಸ್ಯರಾಗಿ ನೇಮಿಸಲಾಗಿದೆ.

ಆರ್ಥಿಕ ವ್ಯವಹಾರ ಕುರಿತ ಸಮಿತಿ, ಹೂಡಿಕೆ ಮತ್ತು ಪ್ರಗತಿ ಸಂಬಂಧಿಸಿದ ಸಮಿತಿ, ಕೌಶಲ ಅಭಿವೃದ್ಧಿ ಸಮಿತಿಗಳಿಗೆ ಪ್ರಧಾನಿ ಅಧ್ಯಕ್ಷರಾಗಿದ್ದಾರೆ. ಅಮಿತ್ ಶಾ ಅವರು ವಸತಿ ಹಾಗೂ ಸಂಸದೀಯ ವ್ಯವಹಾರ ಕುರಿತ ಸಮಿತಿಗಳಿಗೆ ಅಧ್ಯಕ್ಷರಾಗಿದ್ದಾರೆ.

ಹೊಸದಾಗಿ ರಚನೆಯಾಗಿರುವ ಎಲ್ಲ ಸಂಪುಟ ಸಮಿತಿಗಳಲ್ಲಿ ಅಮಿತ್ ಶಾ ಇದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಳು ಸಮಿತಿಗಳಲ್ಲಿ, ಸಚಿವರಾದ ಪೀಯೂಶ್ ಗೋಯಲ್, ನಿತಿನ್ ಗಡ್ಕರಿ ತಲಾ ನಾಲ್ಕು ಸಮಿತಿಯಲ್ಲಿ, ಧರ್ಮೆಂದ್ರ ಪ್ರಧಾನ್ ಎರಡು ಸಮಿತಿಗಳಲ್ಲಿ ಇದ್ದಾರೆ. ರಾಜನಾಥ್ ಸಿಂಗ್ ಅವರು ಭದ್ರತೆಗೆ ಸಂಬಂಧಿಸಿದ ಸಮಿತಿಯಲ್ಲಷ್ಟೇ ಇದ್ದಾರೆ.

ಸ್ಮೃತಿ ಇರಾನಿ ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಕುರಿತ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.

ನಿರ್ಮಲಾ ಸೀತಾರಾಮನ್, ಹರ್‌ಸಿಮ್ರತ್ ಕೌರ್ ಬಾದಲ್ ಕೂಡಾ ವಿಶೇಷ ಆಹ್ವಾನಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.