ನವದೆಹಲಿ: ಎಲ್ಗಾರ್ ಪರಿಷತ್ನ ಮಾವೊವಾದಿಗಳೊಂದಿಗೆ ನಂಟು ಹೊಂದಿದ್ದ ಆರೋಪದಡಿ ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರ ಮಹೇಶ್ ರಾವತ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಎನ್ಐಎಗೆ ಶುಕ್ರವಾರ ನಿರ್ದೇಶನ ನೀಡಿದೆ.

ತನ್ನ ಅಜ್ಜಿ ನಿಧನರಾಗಿರುವ ಕಾರಣ ವಿಧಿ–ವಿಧಾನಗಳಲ್ಲಿ ಭಾಗಿಯಾಗಲು ಅವಕಾಶ ನೀಡಬೇಕೆಂದು ಕೋರಿ ರಾವತ್ ಅರ್ಜಿ ಸಲ್ಲಿಸಿದ್ದರು. ‘ಅವರ ಅಂತಿಮ ಸಂಸ್ಕಾರ ಮೇ 26ರಂದು ನಡೆದಿದೆ. ಇನ್ನು ಯಾವ ಕಾರ್ಯ ಬಾಕಿ ಇದೆ? ಈ ಬಗ್ಗೆ ನೀವು ಯಾವುದೇ ಮಾಹಿತಿ ನೀಡಿಲ್ಲ’ ಎಂದು ನ್ಯಾಯಾಲಯವು ರಾವತ್ ಪರ ವಕೀಲರಿಗೆ ತಿಳಿಸಿತು.

ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರ ನ್ಯಾಯಪೀಠವು ಅರ್ಜಿಯ ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿದೆ.

2017ರ ಡಿಸೆಂಬರ್ 31ರಂದು ಎಲ್ಗಾರ್ ಪರಿಷತ್ನ ಸಮಾವೇಶ ನಡೆದಿತ್ತು. ಇದಕ್ಕೆ ನಕ್ಸಲರು ಹಣ ಪೂರೈಸಿದ್ದರು ಮತ್ತು ಅಲ್ಲಿ ನಡೆದ ಉದ್ರೇಕಕಾರಿ ಭಾಷಣಗಳಿಂದಾಗಿ ಸಮಾವೇಶದ ಮರುದಿನ ಕೋರೆಗಾಂವ್– ಭೀಮಾ ಸ್ಮಾರಕದ ಬಳಿ ಹಿಂಸಾಚಾರ ನಡೆಯಿತು ಎಂದು ಪೊಲೀಸರು ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಎನ್ಐಎ 2018ರ ಜೂನ್ನಲ್ಲಿ ರಾವತ್ ಅವರನ್ನು ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.