ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಪಲಾಯನಗೈದು ಸದ್ಯ ಲಂಡನ್ ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿಗೆ ₹29.75 ಕೋಟಿ ಮೌಲ್ಯದ ಸೊತ್ತುಗಳನ್ನು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
.ನೀರವ್ ಮೋದಿ, ಲಲಿತ್ ಮೋದಿ ಕಳ್ಳರಲ್ಲವೇ?: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ .
ಬ್ಯಾಂಕ್ ಠೇವಣಿ ಹಾಗೂ ಕಟ್ಟಡ ರೂಪದಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು. ಈಗಾಗಲೇ ದೇಶ ಹಾಗೂ ವಿದೇಶಗಳ ಸೇರಿ ಒಟ್ಟು ₹2,596 ಕೋಟಿ ಮೌಲ್ಯದ ಸೊತ್ತುಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.

53 ವರ್ಷದ ನೀರವ್ ಮೋದಿ ಸದ್ಯ ಲಂಡನ್ ಜೈಲಿನಲ್ಲಿದ್ದು, ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ಅರ್ಜಿಯು ವಿಚಾರಣೆ ಹಂತದಲ್ಲಿದೆ.
.ನೀರವ್ ಮೋದಿ ಕೊಟ್ಟ ನಕಲಿ ವಜ್ರ ಉಂಗುರದಿಂದ ಮುರಿದು ಬಿದ್ದ ನಿಶ್ಚಿತಾರ್ಥ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹16 ಸಾವಿರ ಕೋಟಿ ವಂಚಿಸಿ, ವಿದೇಶಕ್ಕೆ ಪರಾರಿಯಾಗಿರುವ ಈತನನ್ನು, 2019ರಲ್ಲಿ ಮುಂಬೈನ ಹಣ ಅಕ್ರಮ ವರ್ಗಾವಣೆ ತಡೆ ನ್ಯಾಯಾಲಯವು 2019ರಲ್ಲಿ ‘ತಲೆಮರೆಸಿಕೊಂಡ ಆರೋಪಿ’ ಎಂದು ಘೋಷಿಸಿತ್ತು. ಅದೇ ವರ್ಷ ಲಂಡನ್‌ನಲ್ಲಿ ಆತನ ಬಂಧನವೂ ಆಗಿತ್ತು.

ಆತನ ಮೇಲಿರುವ ಮೊಕದ್ದಮೆಗಳನ್ನು ಇ.ಡಿ ಹಾಗೂ ಸಿ.ಬಿ.ಐ ಕಳೆದ ಐದು ವರ್ಷಗಳಿಂದ ತನಿಖೆ ನಡೆಸುತ್ತಿವೆ.
.ನೀರವ್ ಮೋದಿ ಆಸ್ತಿ ಜಪ್ತಿ ಮಾಡಲು ನ್ಯಾಯಾಲಯದ ಅನುಮತಿ ಕೋರಿದ ಇಡಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.