ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಐರೋಪ್ಯಒಕ್ಕೂಟದ ಸಂಸದರ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡಿತ್ತು. ಇದು ಖಾಸಗಿ ಭೇಟಿ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿದೆ.

ಐರೋಪ್ಯಒಕ್ಕೂಟದ 27 ಸಂಸದರ ನಿಯೋಗವು 2019 ಅಕ್ಟೋಬರ್ 28 ರಂದು ಕಾಶ್ಮೀರಕ್ಕೆ ಭೇಟಿ ನೀಡಿತ್ತು. ಇದರಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳಿದ್ದರು. ನವೆಂಬರ್ 1ರವರೆಗೆ ಈ ನಿಯೋಗ ಕಾಶ್ಮೀರದಲ್ಲಿತ್ತು. ದೆಹಲಿ ಮೂಲದ ಚಿಂತಕರ ಚಾವಡಿ ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಫಾರ್ ನಾನ್ಅಲೈನ್ಡ್ ಸ್ಟಡೀಸ್ ಈ ನಿಯೋಗವನ್ನು ಕಾಶ್ಮೀರಕ್ಕೆ ಆಮಂತ್ರಿಸಿದ್ದು ಇದು ಖಾಸಗಿ ಭೇಟಿಯಾಗಿತ್ತು ಎಂದು ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ ಅವರು ರಾಜ್ಯಸಭೆಗೆ ಲಿಖಿತ ಉತ್ತರನೀಡಿದ್ದಾರೆ.

ಇದನ್ನೂ ಓದಿ:ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ಅಗತ್ಯ: ಮೋದಿ

ಕಾಶ್ಮೀರಕ್ಕೆ ಯುರೋಪ್ ಸಂಸದರ ನಿಯೋಗ ಭೇಟಿ ನೀಡಿದಾಗ ಅದರಖರ್ಚು ವೆಚ್ಚವನ್ನು ಯಾರು ವಹಿಸಿದ್ದರು ಎಂಬ ಪ್ರಶ್ನೆಗಳಿಗೆ ರೆಡ್ಡಿ ಈ ಉತ್ತರ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿಇತರರರು ಮಧ್ಯಪ್ರವೇಶಿಸಬಾರದು ಎಂಬ ನೀತಿಯನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು , ಪಾಕಿಸ್ತಾನದೊಂದಿನ ಮಾತುಕತೆ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಮಾತ್ರ ಆಗಲಿದೆ. ಇದರಲ್ಲಿ ಮೂರನೆಯವರುಮಧ್ಯಪ್ರವೇಶಿಸುವಂತಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಬೆಂಬಲ: ಯುರೋಪ್ ಸಂಸದರ ನಿಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.