ನವದೆಹಲಿ: ಕಾಂಗ್ರೆಸ್ನ ಮಾಜಿ ಶಾಸಕ ಸುಮೇಶ್ ಶೌಕೀನ್ ಅವರು ‘ಆಪ್’ನ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರ್ಪಡೆಯಾದರು.

ಶೌಕೀನ್ ದೆಹಲಿಯ ದೆಹಾತ್ ಪ್ರದೇಶ ಎಂದು ಪರಿಗಣಿಸಲಾದ ಮಟಿಯಾಲ ಕ್ಷೇತ್ರದ ಮಾಜಿ ಶಾಸಕ. ಜಾಟ್ ನಾಯಕ ಕೈಲಾಶ್ ಗಹಲೋತ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮರುದಿನವೇ ಶೌಕೀನ್ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಅವರನ್ನು ಸ್ವಾಗತಿಸಿದ ಕೇಜ್ರಿವಾಲ್, ‘ಶೋಕೀನ್ ಅವರ ಆಗಮನವು ದೆಹಲಿಯ ಗ್ರಾಮೀಣ ಭಾಗವಲ್ಲದೇ ಇತರೆ ಭಾಗಗಳಲ್ಲೂ ಪಕ್ಷದ ಬಲ ಹೆಚ್ಚಿಸಲಿದೆ’ ಎಂದು ಹೇಳಿದರು.

ದೆಹಲಿ–ದೆಹಾತ್ ಪ್ರದೇಶಗಳಲ್ಲಿ ಸಂಪರ್ಕ ಸಾರಿಗೆ ವ್ಯವಸ್ಥೆಯನ್ನು ಆಪ್ ಸುಧಾರಿಸಿದೆ. ಹಲವಾರು ಅಭಿವೃದ್ಧಿ ಕೆಲಸಗಳನ್ನೂ ಕೈಗೊಂಡಿದೆ ಎಂದು ಶೌಕೀನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.