ಕಳೆದ ಆರು ತಿಂಗಳ ಅವಧಿಯಲ್ಲಿ 320 ಕೋಟಿ ನಕಲಿ ಖಾತೆಗಳನ್ನು ಮತ್ತು 1 ಕೋಟಿ 4 ಲಕ್ಷ ದ್ವೇಷಪೂರಿತ ಭಾಷಣಗಳಿರುವ ಪೋಸ್ಟ್‌ಗಳನ್ನು ತೆಗೆದು ಹಾಕಿರುವುದಾಗಿ ಫೇಸ್‌ಬುಕ್ ಸಂಸ್ಥೆ ದೃಢಪಡಿಸಿದೆ. ಆ ಮೂಲಕ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 504 ಕೋಟಿ ನಕಲಿ ಖಾತೆಗಳನ್ನು ಕಿತ್ತು ಹಾಕಿರುವುದಾಗಿಫೇಸ್‌ಬುಕ್ ತಿಳಿಸಿದೆ.

‘ಕಳೆದ ಎರಡು ತ್ರೈಮಾಸಿಕಗಳಲ್ಲಿ, ನಕಲಿ ಮತ್ತು ನಿಂದನೀಯ ಖಾತೆಗಳನ್ನು ಕಂಡುಹಿಡಿಯುವ ಕಾರ್ಯದಲ್ಲಿ ನಾವು ಸುಧಾರಣೆ ಕಂಡಿದ್ದೇವೆ. ನಕಲಿ ಖಾತೆ ತೆರೆಯುವ ಲಕ್ಷಾಂತರ ಪ್ರಯತ್ನಗಳನ್ನು ಪತ್ತೆ ಹಚ್ಚುವ ಮೂಲಕ ವಿಫಲಗೊಳಿಸಿದ್ದೇವೆ.’ ಎಂದು ಸಂಸ್ಥೆ ತಿಳಿಸಿದೆ.

ಕಳೆದ ಎರಡು ತ್ರೈಮಾಸಿಕಗಳಲ್ಲಿ ತಮ್ಮ ಪೂರ್ವಭಾವಿ ಸೇವಾ (proactive rate) ದರವು ಶೇ.99ರಷ್ಟು ಇದೆ. ಜಗತ್ತಿನಾದ್ಯಂತ ಇರುವ ಫೇಸ್‌ಬುಕ್‌ನ ಸಕ್ರಿಯ ಬಳಕೆದಾರರಲ್ಲಿ ಶೇ.5ರಷ್ಟು ನಕಲಿ ಖಾತೆಗಳಿವೆ ಎಂದು ಸಂಸ್ಥೆ ಹೇಳಿದೆ.

ಸಂಸ್ಥೆ ನೀಡಿರುವ ವರದಿ ಪ್ರಕಾರ, ಲೈಂಗಿಕ ನಿಂದನೆ ಮತ್ತು ಮಕ್ಕಳ ನಗ್ನತೆ ಹೊಂದಿರುವ 1 ಕೋಟಿ 85 ಲಕ್ಷ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆ. ಭಯೋತ್ಪಾದನೆ ಹರಡುವ ಯಾವುದೇ ಮಾಹಿತಿಯನ್ನು ಕಿತ್ತು ಹಾಕುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ ಎಂದು ಫೇಸ್‌ಬುಕ್ ಸಂಸ್ಥೆ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.