ಮುಂಬೈ: ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಆತನ ಪಾಲುದಾರರ ಬಳಿ ₹10 ಕೋಟಿ ಸುಲಿಗೆಗೆ ಯತ್ನಿಸಿದ ಆರೋಪದಡಿ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್ನ 5 ಮಂದಿಯನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಅವರ ಪಾಲುದಾರರು ಮುಂಬೈ ಕ್ರೈಂ ಬ್ರಾಂಚ್ನ ಸುಲಿಗೆ ವಿರೋಧಿ ಸೆಲ್ಗೆ(ಎಇಸಿ) ದೂರು ನೀಡಿದ್ದರು.

ಆರೋಪಿಗಳು ₹10 ಕೋಟಿ ಹಣಕ್ಕಾಗಿ ನಿರಂತರ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಡೆವಲಪರ್ ಮತ್ತು ಅವರ ಪಾಲುದಾರರು ₹55 ಲಕ್ಷ ಪಾವತಿಸಿದ್ದರು. ಆದರೆ,ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ ಬೆದರಿಕೆ ಕರೆಗಳನ್ನು ಮಾಡುತ್ತಲೇ ಇದ್ದರು.

ಮಂಗಳವಾರ ಛೋಟಾ ರಾಜನ್ ಗ್ಯಾಂಗ್ ಸದಸ್ಯ ಗಣೇಶ್ ರಾಮ್ ಶೋರಾಡಿ ಅಲಿಯಾಸ್ ಡ್ಯಾನಿ (68) , ರೆಮಿ ಫೆರ್ನಾಂಡಿಸ್ (58), ಪ್ರದೀಪ್ ಯಾದವ್ (40), ಮನೀಶ್ ಭಾರದ್ವಾಜ್ (44), ಮತ್ತು ಶಶಿ ಯಾದವ್ (43) ಖರ್ಚಿಗಾಗಿ ₹5 ಲಕ್ಷ ಕೇಳಿದ್ದರು. ಹಣ ಪಡೆಯಲು ಬಾಂದ್ರಾ ವೆಸ್ಟ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ಬಳಿ ಬರ ಹೇಳಿ ಸುಲಿಗೆಕೋರರನ್ನು ಕ್ರೈಂ ಬ್ರಾಂಚ್ನ ಎಇಸಿ ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸುಲಿಗೆ ಯತ್ನ ದೃಢಪಟ್ಟ ನಂತರ ಈ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಗಣೇಶ್ ಶೋರಾಡಿ ಎಂಬಾತ ಕೊಲೆ, ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿಯ ಪ್ರಕರಣಗಳಡಿ ಪೊಲೀಸರಿಗೆ ಬೇಕಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.