ಚೆನ್ನೈ: ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 40 ಮಂದಿ ಭಾರತೀಯರು ಮೃತಪಟ್ಟಿದ್ದು, ಮೃತರಲ್ಲಿ ಐವರು ತಮಿಳುನಾಡಿಗೆ ಸೇರಿದ್ದಾರೆ ಎಂದು ತಮಿಳುನಾಡು ಅಲ್ಪಸಂಖ್ಯಾತ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಕೆ.ಎಸ್. ಮಸ್ತಾನ್ ಗುರುವಾರ ಹೇಳಿದ್ದಾರೆ.
.ಕುವೈತ್ ಅಗ್ನಿದುರಂತ: ಸತ್ತವರಲ್ಲಿ ಹೆಚ್ಚಿನವರು ಕೇರಳದವರು.ಪೋಕ್ಸೊ ಪ್ರಕರಣದ ಆರೋಪಿ BSY ಬಂಧನ ಕೋರಿ ಅರ್ಜಿ: ಕೆಲವೇ ಸಮಯದಲ್ಲಿ ಆದೇಶ ಪ್ರಕಟ.
ಮೃತರು ರಾಜ್ಯದ ತಂಜಾವೂರು, ರಾಮನಾಥಪುರಂ ಮತ್ತು ಪೆರವೂರಾಣಿ ಪ್ರದೇಶಗಳಿಗೆ ಸೇರಿದವರು. ಮೃತರನ್ನು ರಾಮ ಕರುಪ್ಪನ್, ವೀರಸಾಮಿ ಮರಿಯಪ್ಪನ್, ಚಿನ್ನದುರೈ ಕೃಷ್ಣಮೂರ್ತಿ, ಮೊಹಮ್ಮದ್ ಶೆರಿಫ್ ಮತ್ತು ರಿಚರ್ಡ್ ಎಂದು ಗುರುತಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ನಿರ್ದೇಶನದಂತೆ ಮೃತ ದೇಹಗಳನ್ನು ಕುಟುಂಬದವರಿಗೆ ಹಸ್ತಂತರಿಸಲು ಹಾಗೂ ಗಾಯಗೊಂಡವರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಅಲ್ಲಿನ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಮಸ್ತಾನ್ ತಿಳಿಸಿದ್ದಾರೆ.
.ಸಿಕ್ಕಿಂನಲ್ಲಿ ಭೂಕುಸಿತ: ಒಬ್ಬ ಸಾವು, ಐವರು ನಾಪತ್ತೆ.ಉಕ್ರೇನ್–ರಷ್ಯಾ ಯುದ್ಧದಲ್ಲಿ ಮತ್ತೊಬ್ಬ ಭಾರತೀಯ ಸಾವು.
ಕುವೈತ್‌ನ ಕಟ್ಟಡವೊಂದರಲ್ಲಿ ಬುಧವಾರ ನಡೆದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹಲವರು ಭಾರತೀಯರು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕುವೈತ್‌ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡದಲ್ಲಿ ಒಂದೇ ಕಂಪನಿಯ 160 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.