ಜೈಪುರ: ಆಭರಣ ವ್ಯಾಪಾರಿ ಯೊಬ್ಬರು ₹300 ಮೌಲ್ಯದ ಕೃತಕ ರತ್ನದ ಹರಳುಗಳಿಗೆ ತನ್ನಿಂದ ₹6 ಕೋಟಿ ಪಡೆದು ವಂಚಿಸಿದ್ದಾರೆ ಎಂದು ಅಮೆರಿಕ ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಚೆರಿಶ್ ಎನ್ನುವ ಮಹಿಳೆ ಗೋಪಾಲ್‌ಜೀ ರಸ್ತೆಯ ರಾಮ ರೋಡಿಯಂ ಅಂಗಡಿಗೆ ಭೇಟಿ ನೀಡಿದ್ದರು. ಅವರಿಗೆ ಅಂಗಡಿಯವರು ಹಾಲ್‌ಮಾರ್ಕ್ ಆಭರಣ ಮತ್ತು ಹಾಲ್‌ಮಾರ್ಕ್ ಪ್ರಮಾಣಪತ್ರವನ್ನುತೋರಿಸಿದ್ದರು. ಅದನ್ನು ನೋಡಿ ನಂಬಿದ ಆಕೆ ಬಂಗಾರದ ಲೇಪನ ಇರುವ ಬೆಳ್ಳಿಯ ಆಭರಣಗಳನ್ನು ಕೊಂಡಿದ್ದಾರೆ ಎಂದು ಜೈಪುರದ ಡಿಸಿಪಿ ಭಜರಂಗ್ ಸಿಂಗ್ ಶೆಖಾವತ್ ಹೇಳಿದ್ದಾರೆ.

ಅಮೆರಿಕದಲ್ಲಿ ಅದನ್ನು ಪ್ರದರ್ಶನಕ್ಕಿಟ್ಟಾಗ ಅವು ನಕಲಿ ಎನ್ನುವುದು ಆಕೆಗೆ ಗೊತ್ತಾಗಿದೆ. ನಂತರ ಜೈಪುರಕ್ಕೆಬಂದ ಆಕೆ, ಅಂಗಡಿ ಮಾಲೀಕ ರಾಜೇಂದ್ರ ಮತ್ತು ಅವರ ಮಗ ಗೌರವ್ ಸೋನಿ ವಿರುದ್ಧ ಅಮೆರಿಕ ರಾಯಭಾರ ಕಚೇರಿಗೆ ದೂರು ನೀಡಿದರು. ಇದಲ್ಲದೇ ಇದೇ ಮೇ ತಿಂಗಳಲ್ಲಿ ಆಕೆ ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.