ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ (74) ಅವರು ಕಣದಲ್ಲಿರುವ ಹಿರಿಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಫೋರ್ಬ್ಸ್ ನಿಯತಕಾಲಿಕೆಯ ಪಟ್ಟಿಯ ಪ್ರಕಾರ ಸಾವಿತ್ರಿ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ ಆಗಿದ್ದಾರೆ. ಉದ್ಯಮಿ ಓಂ ಪ್ರಕಾಶ್ ಜಿಂದಾಲ್ (ಒ.ಪಿ. ಜಿಂದಾಲ್) ಅವರ ಪತ್ನಿಯಾಗಿರುವ ಸಾವಿತ್ರಿ, ಒಬ್ಬ ಸಾಮಾನ್ಯ ಅಭ್ಯರ್ಥಿಯಂತೆ ಪ್ರಚಾರ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವರ ನಿರ್ಧಾರವು ಹರಿಯಾಣ ರಾಜಕೀಯದಲ್ಲಿ ಹಲವರ ಹುಬ್ಬೇರುವಂತೆ ಮಾಡಿದೆ. ‘ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಮ್ಮ ಬೆಂಬಲಿಗರು ಬಯಸಿದ್ದರಿಂದ ನಾನು ಕಣಕ್ಕಿಳಿದಿದ್ದೇನೆ’ ಎಂದು ಸಾವಿತ್ರಿ ಹೇಳಿದ್ದಾರೆ.

ಒ.ಪಿ. ಜಿಂದಾಲ್ ಅವರು 90ರ ದಶಕದ ಆರಂಭದಲ್ಲಿ ತಮ್ಮ ಮೊದಲ ಚುನಾವಣೆ ಗೆದ್ದಿದ್ದರು. 2004ರಲ್ಲಿ ಅವರು ಹಿಸಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಗೆದ್ದು, ಭೂಪಿಂದರ್ ಸಿಂಗ್ ಹೂಡಾ ಸರ್ಕಾರದಲ್ಲಿ ಸಚಿವರೂ ಆದರು. ಮುಂದಿನ ವರ್ಷ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು.

ಬಳಿಕ ನಡೆದ ಚುನಾವಣೆಯಲ್ಲಿ ಹಿಸಾರ್ ಕ್ಷೇತ್ರದಿಂದ ಗೆದ್ದ ಸಾವಿತ್ರಿ ಅವರು 2014ರ ವರೆಗೂ ಸಚಿವರಾಗಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋತರು.

ಸಾವಿತ್ರಿ ಅವರ ಪುತ್ರ ನವೀನ್ ಜಿಂದಾಲ್, ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನಿಂದ ಎರಡು ಸಲ ಜಯಿಸಿದ್ದಾರೆ. 2024ರ ಚುನಾವಣೆಗೂ ಮುನ್ನ ಬಿಜೆಪಿ ಸೇರಿ, ಅದೇ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆಯಾದರು.

ಹಿಸಾರ್ ಕ್ಷೇತ್ರದ ಟಿಕೆಟ್ ತಮ್ಮ ಕುಟುಂಬದ ಸದಸ್ಯನಿಗೆ ಸಿಗಬೇಕು ಎಂದು ಜಿಂದಾಲ್ ಕುಟುಂಬ ಬಯಸಿತ್ತು. ಆದರೆ ಬಿಜೆಪಿ ಅದಕ್ಕೆ ಒಪ್ಪಿಲ್ಲ. ಇದರಿಂದ ಸಾವಿತ್ರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹಾಲಿ ಶಾಸಕ ಮತ್ತು ಸಚಿವರೂ ಆಗಿರುವ ಬಿಜೆಪಿಯ ಡಾ.ಕಮಲ್ ಗುಪ್ತಾ ಅವರು ಸಾವಿತ್ರಿ ಅವರ ಪ್ರಮುಖ ಎದುರಾಳಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.