ಬೆಂಗಳೂರು: ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ ‘ಗಗನಯಾನ’ದ ‘ಸರ್ವೀಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್’ (ಎಸ್‌ಎಂಪಿಎಸ್)ನ ಕಾರ್ಯಕ್ಷಮತೆ ಮತ್ತು ಸನ್ನದ್ಧತೆಯನ್ನು ಒರೆಗೆ ಹಚ್ಚುವ ಮತ್ತೆ ಎರಡು ಪರೀಕ್ಷೆಗಳನ್ನು (ಹಾಟ್ ಟೆಸ್ಟ್) ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೊ ತಿಳಿಸಿದೆ.

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮಹೇಂದ್ರಗಿರಿಯಲ್ಲಿರುವ ಸಂಸ್ಥೆಯ ಪ್ರೊಪಲ್ಷನ್ ಕೇಂದ್ರದಲ್ಲಿ ಎರಡು ಮತ್ತು ಮೂರನೇ ‘ಹಾಟ್ ಟೆಸ್ಟ್’ಗಳನ್ನು ಬುಧವಾರ ನಡೆಸಲಾಯಿತು ಎಂದು ಇಸ್ರೊ ತಿಳಿಸಿದೆ. ಮೊದಲ ಪರೀಕ್ಷೆಯನ್ನು ಜುಲೈ 19ರಂದು ನಡೆಸಲಾಗಿತ್ತು.

ಗಗನಯಾನಕ್ಕೆ ಸಂಬಂಧಿಸಿದ ಇನ್ನೂ ಮೂರು ಪರೀಕ್ಷೆಗಳನ್ನು ನಿಗದಿತ ದಿನಗಳನ್ನು ನಡೆಸಲಾಗುವುದು ಎಂದೂ ಇಸ್ರೊ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.