ಮುಂಬೈ: ಭೂಗತ ಪಾತಕಿ ಅಬು ಸಲೇಂ ಮತ್ತು ಕುಖ್ಯಾತ ರೌಡಿ ಖಾನ್ ಮುಬಾರಕ್ ಸಹಚರ ಗಜೇಂದ್ರ ಸಿಂಗ್‌ನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಪೊಲೀಸರು ಬುಧವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದ್ದಾರೆ.

1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಬು ಸಲೇಂ ಜೊತೆ ಗಜೇಂದ್ರ ಸಿಂಗ್ ನಿಕಟ ಸಂಪರ್ಕ ಹೊಂದಿದ್ದ. ಮುಂಬೈ ಬಾಂಬ್ ಸ್ಪೋಟ ಪ್ರಕರಣದಲ್ಲಿ ಅಬು ಸಲೇಂನಿಗೆ ಶಿಕ್ಷೆಯಾದ ನಂತರ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಖಾನ್ ಮುಬಾರಕ್‌ನೊಂದಿಗೆ ಗಜೇಂದ್ರ ಸಿಂಗ್ ಗುರುತಿಸಿಕೊಂಡಿದ್ದನೆಂದು ತಿಳಿದುಬಂದಿದೆ.

'ಅಬು ಸೇಲಂ ಮತ್ತು ಖಾನ್ ಮುಬಾರಕ್ ಅವರಿಗೆ ಸಂಬಂಧಿಸಿದ ಅಕ್ರಮ ಹಣವನ್ನು ಗಜೇಂದ್ರ ಸಿಂಗ್ ದೆಹಲಿಯಲ್ಲಿ ಹೂಡಿಕೆ ಮಾಡಿದ್ದಾನೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಸುಲಿಗೆ ಪ್ರಕರಣಗಳಲ್ಲಿ ಗಜೇಂದ್ರ ಸಿಂಗ್ ಪೊಲೀಸರಿಗೆ ಬೇಕಾಗಿದ್ದನೆಂಬ ಮಾಹಿತಿ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.