ಬೆಂಗಳೂರು:ಕೇರಳದ ಕೊಚ್ಚಿ ಬಳಿ ಅರಬ್ಬಿ ಸಮುದ್ರದಲ್ಲಿ ದ್ವೀಪವೊಂದು ಗೋಚರಿಸಿದೆ. ಅರೆ ಅಲ್ಲಿ ದ್ವೀಪ ಎಲ್ಲಿದೆ? ಅದೇಕೆ ಈಗ ಗೋಚರಿಸುತ್ತದೆ? ಎಂದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿಯನ್ನೊಮ್ಮೆ ಓದಿ.

ನೀವು ಗೂಗಲ್ ಮ್ಯಾಪ್ನಲ್ಲಿ ಕೊಚ್ಚಿ ಕಡಲತೀರವನ್ನು ನೋಡಿದರೆ, ಅರ್ಧ ಕೊಚ್ಚಿಯಷ್ಟು, ಮೂತ್ರಪಿಂಡದಾಕಾರದಲ್ಲಿರುವ ದ್ವೀಪದ ಆಕೃತಿಯೊಂದು ಗೋಚರಿಸುತ್ತದೆ. ಕೇರಳದ ಕಡಲತೀರ ಪರಿಚಯ ಇರುವವರು ಇದನ್ನು ನೋಡಿ ಗೊಂದಲಕ್ಕೆ ಒಳಗಾಗಿದ್ದಾರೆ.

ಅಲ್ಲಿ ದ್ವೀಪ ಅಥವಾ ನಡುಗಡ್ಡೆಯೇ ಇಲ್ಲವಲ್ಲ, ಏನಿದು ವಿಚಿತ್ರ ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ದಿ ನ್ಯೂಸ್ ಮಿನಿಟ್ ವೆಬ್ಸೈಟ್ ವರದಿ ಮಾಡಿದೆ.

ಕೊಚ್ಚಿ ಬಂದರು ಗೇಟ್ನಿಂದ ಪಶ್ಚಿಮಕ್ಕೆ ಸುಮಾರು 7 ಕಿ.ಮೀ ದೂರದಲ್ಲಿ ಸುಮಾರು 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿರುವ ದ್ವೀಪ ಗೋಚರಿಸಿದೆ. ಇದು ಸಮುದ್ರದಲ್ಲಿ ಹುದುಗಿದಂತೆ ತೋರುತ್ತದೆ.

ಈ ಕುರಿತು ಪರಿಶೀಲಿಸುವಂತೆ ಚೆಲ್ಲಮ್ ಕಾರ್ಶಿಕ್ ಪ್ರವಾಸೋಧ್ಯಮ ಸೊಸೈಟಿಯು, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಯಲಯಕ್ಕೆ ಮನವಿ ಮಾಡಿದೆ.

ಸೊಸೈಟಿಯ ಅಧ್ಯಕ್ಷ ಝೇವಿಯರ್ ಜುಲಪ್ಪನ್ ಅವರು ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ‘ಇದು ಸಮುದ್ರದ ಅಂತರಾಳದಲ್ಲಿ ಮರಳು ಸಂಗ್ರಹದಿಂದ ಉಂಟಾಗಿರುವ ದಿಣ್ಣೆ ಇರಬಹುದು. ಈ ಬಗ್ಗೆ ಅಧ್ಯಯನ ಬೇಕು‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಈ ನಿಗೂಢ ದ್ವೀಪದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಮತ್ತು ಒಂದು ವೇಳೆ ಇದು ಭೌತಿಕವಾಗಿ ಇರುವುದಾದರೇ ಅದರ ಬಗ್ಗೆ ಅಧ್ಯಯನ ನಡೆಸಬೇಕಾಗುತ್ತದೆ‘ ಎಂಬ ಅಭಿಪ್ರಾಯವನ್ನು ವರದಿ ಮಂಡಿಸಿದೆ.

ಇದನ್ನೂ ಓದಿ:ತಿಮಿಂಗಿಲ ನುಂಗಿದರೂ ಬದುಕಿ ಬಂದೆ: ಸೀ ಡೈವರ್ ಹೇಳಿದ ರೋಚಕ ಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.