ನವದೆಹಲಿ: ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಜಾಕೀರ್ ನಾಯ್ಕ್ ನೇತೃತ್ವದ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್ಎಫ್) ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳ ಅವಧಿಗೆ ವಿಸ್ತರಿಸಿದೆ.

ಐಆರ್ಎಫ್ ದೇಶದ ಭದ್ರತೆ ಹಾಗೂ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಜೊತೆಗೆ, ದೇಶದಲ್ಲಿನ ಜಾತ್ಯತೀತ ವ್ಯವಸ್ಥೆಗೆ ಭಂಗ ತರುವಂತಹ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ.

2017ರ ನವೆಂಬರ್ 17ರಂದು ಕೇಂದ್ರ ಸರ್ಕಾರ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅಡಿಯಲ್ಲಿ ಮೊದಲ ಬಾರಿಗೆ ಐಆರ್ಎಫ್ ಸಂಸ್ಥೆಯನ್ನು ಕಾನೂನು ಬಾಹಿರ ಸಂಸ್ಥೆ ಎಂದು ಘೋಷಿಸಿತ್ತು.

ಐಆರ್ಎಫ್ ಮತ್ತು ಅದರ ಸದಸ್ಯರು, ಅದರಲ್ಲೂ ಮುಖ್ಯವಾಗಿ ಜಾಕೀರ್ ನಾಯ್ಕ್, ದೇಶದ ವಿವಿಧ ಜಾತಿಗಳು, ಸಮುದಾಯಗಳು, ಗುಂಪುಗಳ ನಡುವೆ ಧರ್ಮದ ಹೆಸರಿನಲ್ಲಿ ದ್ವೇಷ, ಸೌಹಾರ್ದತೆಗೆ ಧಕ್ಕೆ ತರಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಜಾಕೀರ್ ನಾಯ್ಕ್ ತಮ್ಮ ಭಾಷಣಗಳ ಮೂಲಕ ಇಂತಹ ಪ್ರಚೋದನೆ ಮಾಡುತ್ತಿದ್ದಾರೆ. ಐಆರ್ಎಫ್ ನಡೆಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಕ್ಷಣ ನಿಯಂತ್ರಿಸದಿದ್ದಲ್ಲಿ, ಈಗಲೂ ತಲೆಮರೆಸಿಕೊಂಡಿರುವ ಸಂಘಟನೆಯ ಕಾರ್ಯಕರ್ತರು ಮತ್ತೆ ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ಮುಂದುವರಿಸುವ ಅಪಾಯವಿದೆ ಎಂದು ಕೇಂದ್ರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.