ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಗತಿಕ ಇಂಡಿಯಾAI ಶೃಂಗಸಭೆ: ಕೃತಕ ಬುದ್ಧಿಮತ್ತೆಯ ಸವಾಲುಗಳ ಸುತ್ತ ಚರ್ಚೆ

Published 1 ಜುಲೈ 2024, 9:35 IST
Last Updated 1 ಜುಲೈ 2024, 9:35 IST
ಅಕ್ಷರ ಗಾತ್ರ

ನವದೆಹಲಿ: ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಮತ್ತು ಸವಾಲಿನ ಕುರಿತ ವಿಚಾರಗಳನ್ನು ಚರ್ಚಿಸಲು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಜುಲೈ 3 ಮತ್ತು 4 ರಂದು ಜಾಗತಿಕ ಮಟ್ಟದ ಎಐ ಶೃಂಗಸಭೆಯನ್ನು ಹಮ್ಮಿಕೊಂಡಿದೆ.

‘ಗ್ಲೋಬಲ್ ಇಂಡಿಯಾ ಎಐ ಶೃಂಗಸಭೆ 2024’ರ ಮೂಲಕ, ಭಾರತವು ಎಐ ಆವಿಷ್ಕಾರದಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳಲಿದೆ. ಅಲ್ಲದೆ ಎಐ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ರಾಷ್ಟ್ರದ ಸಾಮಾಜಿಕ– ಆರ್ಥಿಕ ಪ್ರಗತಿಗೆ ಎಐ ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಕಾರ್ಯಕ್ರಮವು ಎರಡು ದಿನಗಳ ಕಾಲ ನಡೆಯಲಿದ್ದು, ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಅಭಿವೃದ್ಧಿ, ನಿಯೋಜನೆ ಮತ್ತು ಅಳವಡಿಕೆಗಿರುವ ಬದ್ಧತೆಯನ್ನು ಸರ್ಕಾರ ಎತ್ತಿಹಿಡಿಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್‌, ರಾಜ್ಯ ಖಾತೆ ಸಚಿವ ಜಿತಿನ್‌ ಪ್ರಸಾದ್‌ ಮಾತನಾಡಲಿದ್ದಾರೆ.

ಈ ಸಭೆಯು ಪ್ರಮುಖ ಅಂತರರಾಷ್ಟ್ರೀಯ ಎಐ ತಜ್ಞರಿಗೆ ವೇದಿಕೆಯನ್ನು ಒದಗಿಸಲಿದೆ. ವಿಜ್ಞಾನ, ಕೈಗಾರಿಕೆ, ಸರ್ಕಾರ, ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ವಿಭಾಗಗಳ ತಜ್ಞರು ಎಐ ಬಗೆಗಿನ ಮಾಹಿತಿ ಮತ್ತು ಸವಾಲುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT