ಮುಂಬೈ: ‘ಮುಂದಿನ ವರ್ಷದ ಹಜ್ ಯಾತ್ರೆಗೆ ಸಂಬಂಧಿಸಿ ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್ ವಿಧಾನದ ಮೂಲಕವೇ ನಡೆಯಲಿವೆ’ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಇಲ್ಲಿನ ‘ಹಜ್ ಹೌಸ್’ನಲ್ಲಿ ಆನ್‌ಲೈನ್ ಮೂಲಕ ಬುಕ್ಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಂದಿನ ವರ್ಷದ ಹಜ್ ಯಾತ್ರೆ ಕುರಿತು ಘೋಷಣೆ ಮಾಡಲಾಗುವುದು. ಈ ಸಂಬಂಧ ಚರ್ಚಿಸಲು ಅ.21ರಂದು ನವದೆಹಲಿಯಲ್ಲಿ ಪರಿಶೀಲನಾ ಸಭೆ ನಡೆಸಲು ನಿರ್ಧರಿಸಲಾಗಿದೆ’ ಎಂದೂ ಅವರು ಹೇಳಿದರು.

‘ಇಂಡೊನೇಷ್ಯಾ ನಂತರ ಭಾರತದಿಂದಲೇ ಅತಿ ಹೆಚ್ಚಿನ ಸಂಖ್ಯೆಯ ಯಾತ್ರಿಗಳು ಹಜ್‌ಗೆ ತೆರಳುವುದಾಗಿ ಸಚಿವ ನಖ್ವಿ ಹೇಳಿದರು’ ಎಂದು ಕಾರ್ಯಕ್ರಮದ ನಂತರ ಬಿಡುಗಡೆಯಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಕೋವಿಡ್–19 ಪಿಡುಗಿನ ಕಾರಣದಿಂದಾಗಿಸೌದಿ ಅರೇಬಿಯಾ ಸರ್ಕಾರ ಕೈಗೊಂಡ ನಿರ್ಧಾರದಂತೆ 2020 ಹಾಗೂ ಪ್ರಸಕ್ತ ವರ್ಷ ಹಜ್ ಯಾತ್ರೆ ನಡೆಯಲಿಲ್ಲ’ ಎಂದೂ ಹೇಳಿದರು.

ಇದನ್ನೂ ಓದಿ... ಲಖಿಂಪುರ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.