ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸಾದವನ್ನು ತಯಾರಿಸುವಾಗ ‘ಹಲಾಲ್ ಬೆಲ್ಲ’ ಬಳಸಿದ್ದು, ಈ ಕುರಿತು ದೇವಸ್ಥಾನದ ಮುಖ್ಯಅರ್ಚಕರ ಅಭಿಪ್ರಾಯ ಕೇಳಬೇಕೆಂದು ಕೋರಿ ಸೋಮವಾರ ಕೇರಳ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿದೆ.

ಶಬರಿಮಲೆ ಕರ್ಮ ಸಮಿತಿಯ ಪ್ರಧಾನ ಸಂಚಾಲಕ ಎಸ್.ಜೆ.ಆರ್. ಕುಮಾರ್ ಎಂಬುವರು ಅರ್ಜಿ ಸಲ್ಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಹೈಕೋರ್ಟ್ ವರದಿ ಕೇಳಿದೆ.

ಓದಿ:ಕೇರಳ: ‘ಹಲಾಲ್’ ವಿರುದ್ಧದ ಆಂದೋಲನಕ್ಕೆ ಬಿಜೆಪಿ ಬೆಂಬಲ– ಸಿಪಿಎಂ ಖಂಡನೆ

‘ದೇವಸ್ಥಾನವು ಸ್ವೀಕರಿಸಿದ ಬೆಲ್ಲದ ಪ್ಯಾಕೇಜ್ ಮೇಲೆ ‘ಹಲಾಲ್’ ಎಂದು ನಮೂದಿಸಲಾಗಿದೆ. ಇದನ್ನು ಪೂರೈಸುವ ಕಂಪನಿಯು ಅರಬ್ ದೇಶಗಳಿಗೂ ಈ ಬೆಲ್ಲವನ್ನು ರಫ್ತು ಮಾಡುತ್ತದೆ. ಈ ಹಿಂದೆ ಖರೀದಿಸಿದ್ದ ಬೆಲ್ಲಕ್ಕೆ ಹುಳುಬಿದ್ದಿದ್ದು, ಪ್ರಸಾದಕ್ಕೆ ಬಳಸಲು ಯೋಗ್ಯವಲ್ಲದ ಕಾರಣ ಹೊಸ ಬೆಲ್ಲವನ್ನು ಖರೀದಿಸಲಾಗಿದೆ’ ಎಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದೆ. ಆಹಾರ ಸುರಕ್ಷತಾ ಪ್ರಾಧಿಕಾರದ ವರದಿ ಬಂದ ನಂತರ ಬುಧವಾರ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಕೋರ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.