ಚಂಡೀಗಡ: ಹರಿಯಾಣದಲ್ಲಿ ಶುಕ್ರವಾರದ ನಮಾಜ್ ಅನ್ನು ತೆರೆದ ಪ್ರದೇಶಗಳಲ್ಲಿ ನಡೆಸುವುದನ್ನು ವಿರೋಧಿಸಿರುವ ಬಲಪಂಥೀಯ ಸಂಘಟನೆಯೊಂದು ಹಿಂದೂ ಧರ್ಮಕ್ಕೆ ಮರು ಮತಾಂತರವಾಗಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಎಂದು ಮುಸ್ಲಿಮರಿಗೆ ಸೂಚಿಸಿದೆ.

ಹರಿಯಾಣದ ಬಹುತೇಕ ಮುಸ್ಲಿಮರ ಪೂರ್ವಜರು ಹಿಂದೂಗಳು ಎಂದು ಸಂಯುಕ್ತ್ ಸಂಘರ್ಷ ಸಮಿತಿಯ ಅಧ್ಯಕ್ಷ ಮಹಾವೀರ್ ಬಾರಧ್ವಾಜ್ ಹೇಳಿದ್ದಾರೆ. ಸಂಯುಕ್ತ್ ಸಂಘರ್ಷ ಸಮಿತಿಯು 32 ಬಲಪಂಥೀಯ ಸಂಘಟನೆಗಳನ್ನೊಳಗೊಂಡ ಸಂಸ್ಥೆಯಾಗಿದೆ.

‘ನಾವು ಲೇಸರ್ ವ್ಯಾಲಿಯಲ್ಲಿ ಸಾಮೂಹಿಕ ‘ಘರ್ ವಾಪ್ಸಿ’ ಆಯೋಜಿಸಿ ಅವರನ್ನು ಮರು ಮತಾಂತರಗೊಳಿಸಿ ಮುಕ್ತವಾಗಿ ಸ್ವಾಗತಿಸಬಲ್ಲೆವು. ಬಳಿಕ ಅವರು ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದ್ದು, ನಮಾಜ್ ಸಮಸ್ಯೆ ಕೊನೆಗೊಳ್ಳಲಿದೆ’ ಎಂದು ಬಾರಧ್ವಾಜ್ ಹೇಳಿದ್ದಾರೆ.

ಹರಿಯಾಣದಲ್ಲಿ ತೆರೆದ ಪ್ರದೇಶಗಳಲ್ಲಿ ನಮಾಜ್ ಮಾಡುವುದಕ್ಕೆ ಕಳೆದ ಕೆಲವು ತಿಂಗಳುಗಳಿಂದ ಕೆಲವು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿವೆ. ಈ ಸಂಘಟನೆಗಳ ಸದಸ್ಯರು ಕೆಲವೆಡೆ ನಮಾಜ್ ಮಾಡುತ್ತಿರುವಲ್ಲಿಗೆ ತೆರಳಿ ‘ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ್ದ ಬಗ್ಗೆಯೂ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.